‘ಯೋಗಿ ರಾಜ್ಯ’ದಲ್ಲಿ ಮನುಕುಲ ತಲೆತಗ್ಗಿಸುವ ಘಟನೆ – ಊಟ ನೀಡುವ ನೆಪದಲ್ಲಿ 80ರ ವೃದ್ಧೆ ಮೇಲೆ ಅತ್ಯಾಚಾರ..!
ಉತ್ತರಪ್ರದೇಶ : ಯೋಗಿ ರಾಜ್ಯ ಉತ್ತರಪ್ರದೇಶ ಇತ್ತೀಚಿನ ದಿನಗಳಲ್ಲಿ ನಂಬರ್ 1 ಕ್ರೈಮ್ ರೇಟೆಡ್ ಸಿಟಿ ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ.. ಅದ್ರಲ್ಲೂ ಇಲ್ಲಿ ಹೆಣ್ಮಕ್ಕಳು, ಚಿಕ್ಕಿ ಕಂದಮ್ಮಗಳು , ವಿವಾಹಿತ ಮಹಿಳೆಯರು ಅಷ್ಟೇ ಯಾಕೆ ಇಳಿವಯಸ್ಸಿನ ವೃದ್ಧೆಯರಿಗೂ ಸೇಫ್ಟಿ ಇಲ್ಲದ ಪರಿಸ್ಥಿತಿ ಬಂದೊದಗಿದೆ.. ಇದಕ್ಕೆ ಪೂರಕವೆಂಬಂತೆ ಮನುಕುಲವೇ ತಲೆತಗ್ಗಿಸುವಂತಹ ಮತ್ತೊಂದು ಹೇಯ ಕೃತ್ಯ ಅಪರಾಧಗಳ ಆಗರವಾಗಿ ಮಾರ್ಪಾಡಾಗ್ತಿರುವ ಉತ್ತರಪ್ರದೇಶದಲ್ಲಿ ನಡೆದಿದೆ.
ಹೆಂಡತಿ ಜೊತೆ ಜಗಳ : 8 ತಿಂಗಳ ಕಂದಮ್ಮನನ್ನ ನೆಲಕ್ಕೆ ಕುಕ್ಕಿ ಕುಕ್ಕಿ ಕೊಂದ ಪಾಪಿ..!
80 ವರ್ಷದ ವೃದ್ಧೆ ಮೇಲೆ ಸಂಬಧಿಕನೇ ಅತ್ಯಾಚಾರ ಎಸಗಿದ್ದಾನೆ. ಅಗಷ್ಟ್ 1ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ವೃದ್ಧೆಯನ್ನು ತಮ್ಮ ಮನೆಗೆ ಊಟಕ್ಕೆ ಬರುವಂತೆ ಹೇಳಿ ಕರೆದುಕೊಂಡು ಹೋಗಿದ್ದನು. ಈ ವೇಳೆ ಕಂಠಪೂರ್ತಿಯಾಗಿ ಮದ್ಯ ಸೇವಿಸಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ವೃದ್ಧೆ ತೀವ್ರ ಅಸ್ವಸ್ಥಳಾಗಿ ಅಲ್ಲೇ ಬಿದ್ದಿದ್ದು, ಸಂಬಂಧಿಕರು ಬಂದ ತಕ್ಷಣ ನಡೆದಿರುವ ಘಟನೆಯನ್ನು ವೃದ್ಧೆ ಹೇಳಿದ್ದಾರೆ. ಈ ಬಗ್ಗೆ ವಾಜಿರ್‌ಗಂಜ್ ಪೊಲೀಸ್ ಠಾಣೆಯಲ್ಲಿ ತಕ್ಷಣ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ