ಉತ್ತರಪ್ರದೇಶ : ಮತ್ತೆ ಮೂವರು ಆಲ್ ಖೆದಾ ಉಗ್ರರನ್ನು ಬಂಧಿಸಿದ ಪೋಲೀಸರು
ಉತ್ತರಪ್ರದೇಶ : ಇತ್ತೀಚೆಗಷ್ಟೇ ( ಜುಲೈ 11) ಉತ್ತರಪ್ರದೇಶದ ಲಖನೌನಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಅಲ್ ಖೈದಾ ಉಗ್ರ ಸಂಘಟನೆಯ ಮೂವರು ಶಂಕಿತ ಉಗ್ರರನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಬಂಧಿಸಿದೆ. ಇವರು ಆಲ್ ಖೆದಾ ಕಾಶ್ಮೀರ ಘಟಕದೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಅಂದ್ಹಾಗೆ ಈ ಹಿಂದೆ ಬಮಧಿಸಲಾಗಿದ್ದ ಉಗ್ರರ ವಿಚಾರಣೆ ವೇಳೆ ಈ ಮೂವರ ಹೆಸರು ಬೆಳಕಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಾದ ಮೂವರೂ ಲಖನೌ ನಿವಾಸಿಗಳು ಎಂದು ಭಯೋತ್ಪಾದನೆ ನಿಗ್ರಹ ಪಡೆ ತಿಳಿಸಿದೆ.
ಅಲ್ಲದೇ ಈ ಬಗ್ಗೆ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಮಾಹಿತಿ ನೀಡಿದ್ದು, ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಘಟಕವೊಂದನ್ನು ಪತ್ತೆ ಮಾಡಿದ್ದೇವೆ. ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದೇವೆ. ಅವರಿಂದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದೆ.
ಮಹಾರಾಷ್ಟ್ರ : ಇಂದಿನಿಂದ ಗರ್ಭಿಣಿಯರಿಗೂ ಕೊರೋನಾ ಲಸಿಕೆ ವಿತರಣೆ
ಈ ಹಿಂದೆ ಬಂಧಿಯಾಗಿದ್ದ ಉಗ್ರರನ್ನ ಮಿನಾಜ್ ಅಹ್ಮದ್ ಮತ್ತು ಮುಶ್ರುದ್ದೀನ್ ಅಲಿಯಾಸ್ ಮುಶೀರ್ ಎಂದು ಗುರುತಿಸಲಾಗಿದೆ. ಇವರು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯದ ರಾಜಧಾನಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಸದ್ಯ ಇವರ ಜತೆಗಾರರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಮತ್ತಷ್ಟು ಶಂಕಿತರನ್ನು ಬಂಧಿಸಲು ಬೇರೆ ಬೇರೆ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಭಯೋತ್ಪಾದನೆ ನಿಗ್ರಹ ಪಡೆ ಮಾಹಿತಿ ನೀಡಿದೆ. ಲಖನೌನ ಹೊರವಲಯದಲ್ಲಿ ಇರುವ ಕಾಕೋರಿ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರರರನ್ನ ಸದ್ಯ ಬಂಧಿಸಲಾಗಿದೆ.








