ಅಫ್ಗಾನಿಸ್ತಾನದ ಬಾಲಕಿ ಕಳಿಸಿದ್ದ ಕಾಬುಲ್ ನದಿ ನೀರನ್ನು ರಾಮ ಮಂದಿರಕ್ಕೆ ಅರ್ಪಿಸಿದ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ : ಅಫ್ಗಾನಿಸ್ತಾನದ ಬಾಲಕಿಯೊಬ್ಬಳು ರಾಮಜನ್ಮಭೂಮಿಗಾಗಿ ಕಾಬುಲ್ ನದಿ ನೀರನ್ನು ಕಳುಹಿಸಿಕೊಟ್ಟಿದ್ದಳು. ಆ ನೀರನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ಅರ್ಪಣೆ ಮಾಡಿದ್ದಾರೆ. ಬಳಿಕ ಈ ಕುರಿತು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳು ಆಡಳಿತ ವಶಕ್ಕೆ ಪಡೆದುಕೊಂಡಿರುವ ಇಂತಹ ಪರಿಸ್ಥಿತಿಯಲ್ಲೂ ಬಾಲಕಿ ಕಾಬೂಲ್ ನದಿ ನೀರನ್ನು ರಾಮ ಜನ್ಮಭೂಮಿಗಾಗಿ ಕಳುಹಿಸಿದ್ದಾಳೆ.
ಆಕೆಯ ಪರವಾಗಿ ನಾನು ನೀರನ್ನು ಅರ್ಪಿಸುವ ಈ ಕಾರ್ಯ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು. ಬಾಲಕಿಯು ಕಾಬೂಲ್ ನದಿ ನೀರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಳು ಎಂದು ತಿಳಿಸಿದ ಯೋಗಿ ಅವರು ಕಾಬೂಲ್ ನದಿ ನೀರಿನ ಜೊತೆಗೆ ಗಂಗೆಯ ನೀರನ್ನೂ ಸಹ ರಾಮ ಜನ್ಮ ಭೂಮಿಯ ಮಂದಿರ ನಿರ್ಮಾಣ ಸ್ಥಳಕ್ಕೆ ಅರ್ಪಿಸಿದರು.








