ಮದುವೆ ಮಂಟಪಕ್ಕೆ ಕುಡಿದು ಬಂದ ವರ – ಮದುವೆನೇ ಬೇಡ ಎಂದ ವಧು
ಉತ್ತರಪ್ರದೇಶ : ಉತ್ತರಪ್ರದೇಶದ ವರನೊಬ್ಬ ಮದುವೆ ಮಂಟಪಕ್ಕೆ ಕಂಠ ಪೂರ್ತಿ ಕುಡಿದುಬಂದ ಕಾರಣ ವಧು ಮದುವೆಯನ್ನೇ ಬೇಡವೆಂದು ಹೊರನಡೆದ ಘಟನೆ ನಡೆದಿದೆ. ವರ ಮತ್ತು ಆತನ ಸ್ನೇಹಿತ ಮದುವೆ ಮಂಟಪಕ್ಕೆ ಕುಡಿದು ಬಂದ ಹಿನ್ನೆಲೆಯಲ್ಲಿ ಕೋಪಗೊಂಡ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾಳೆ.
ಪ್ರಯಾಗ್ರಾಜನ್ ನ ಪ್ರತಾಪಗಢ ನಗರದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರೈತರೊಬ್ಬರು ತಮ್ಮ ಮಗಳ ಮದುವೆಯನ್ನು ರವೀಂದ್ರ ಪಟೇಲ್ ಎಂಬವರ ಜೊತೆ ನಿಗದಿ ಪಡಿಸಿದ್ದರು. ಆದರೆ ಮದುವೆ ದಿನ ವರ ಮತ್ತು ಆತನ ಸ್ನೇಹಿತರು ಕುಡಿದು ಮಂಟಪಕ್ಕೆ ಬಂದರು. ಈ ವೇಳೆ ವಧು ಹಾಗೂ ಆಕೆಯ ಕುಟುಂಬಸ್ಥರು ಮೊದಲಿಗೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ವರ ವಧುವನ್ನು ಜೈಮಾಲಾ ಹಾಡಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಸಿಟ್ಟಿಗೆದ್ದಿರುವ ವಧು ಈ ನಿರ್ಧಾರ ತೆಗೆದುಕೊಂಡಿದ್ದಾಳೆ.
ವಧು ಮದುವೆಯನ್ನು ನಿರಾಕರಿಸಿದ ನಂತರ ಆಕೆಯ ಕುಟುಂಬಸ್ಥರು ಮದುವೆ ವೇಳೆ ವರನಿಗೆ ನೀಡಿದ್ದ ಉಡುಗೊರೆಯನ್ನು ಹಿಂದಿರುಗಿಸುವಂತೆ ವರನ ಕುಟುಂಬಸ್ಥರನ್ನು ಕೇಳಿದ್ದಾರೆ. ಈ ವಿಚಾರವಾಗಿ ಎರೆಡೂ ಕುಟುಂಬದವರ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ವರನ ಕಡೆಯವರಿಗೆ ನೀಡಿದ್ದ ನಗದು ಹಾಗೂ ಎಲ್ಲಾ ವಸ್ತುಗಳನ್ನ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಪೊಲೀಸರು ಕೂಡ ವರನ ಕುಟುಂಬದವರಿಗೆ ನಗದು ಹಾಗೂ ಎಲ್ಲ ವಸ್ತುಗಳನ್ನ ಹಿಂದಿರುಗಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.








