ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಿದ ಯುವತಿಯರು – ವ್ಯಕ್ತಿ ಆತ್ಮಹತ್ಯೆಗೆ ಶರಣು..!
ಉತ್ತರಪ್ರದೇಶ : ನಾಲ್ವರು ಯುವತಿಯರು ಸೇರಿ ವಿಮಾ ಏಜೆಂಟ್ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪ ದಾಖಲಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ನೆರೆ ಮನೆಯಲ್ಲೇ ವಾಸವಾಗಿದ್ದ ಯುವತಿಯರ ಟಾರ್ಚರ್ ಸಹಿಸಲಾಗದೇ ವಿಮಾ ಏಜೆಂಟ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ವಿಮಾ ಏಜೆಂಟರಾಗಿ ಕೆಲಸ ಮಾಡುತ್ತಿದ್ದ ಸಂಸತ್ರಸ್ತನ ಮೇಲೆ ನೆರೆಮನೆಯ ನಾಲ್ವರು ಯುವತಿಯರು ಅತ್ಯಾಚಾರದ ಸುಳ್ಳು ಆರೋಪ ದಾಖಲಿಸಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಫೇಸ್ ಬುಕ್ ನಲ್ಲಿ ತನ್ನ ಸಾವಿಗೆ ಆ ನಾಲ್ವರು ಯುವತಿಯರೇ ಕಾರಣ ಎಂದು ಪೋಸ್ಟ್ ಮಾಡಿ ವಿಷ ಸೇವಿಸಿ ಸಾವನಪ್ಪಿದ್ದಾನೆ. ಇತ್ತ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಯುವತಿಯರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದು, ಇವರನ್ನ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೂ ದುರಾದೃಷ್ಟವಶಾತ್ ಆತ ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪೋಷಕರು ಫೋನ್ ನಲ್ಲಿ ಗೇಮ್ ಆಡೋದನ್ನ ಬಿಡು ಎಂದಿದ್ದಕ್ಕೆ ನೊಂದ ಬಾಲಕ ಮಾಡಿದ್ದೇನು ಗೊತ್ತಾ..!








