3 ನೇ ಬಾಲಕಿಯ ಮೇಲೆ 71 ವರ್ಷದ ಪ್ರಾಂಶುಪಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ..
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ತಮ್ಮದೇ ಶಾಲಾ ವಿದ್ಯಾರ್ಥಿಯ ಮೇಲೆ ಅತ್ಯಾಚಾರವೆಸಗಿದ್ದಾನೆ..
ವೃದ್ಧ ಪ್ರಾಂಶುಪಾಲನನ್ನ ಇದೀಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ದೇ ಪ್ರಾಂಶುಪಾಲನ ಅಪರಾಧದ ವಿವರಗಳನ್ನು ಮರೆಮಾಚಿದ ಆರೋಪದಲ್ಲಿ ಅದೇ ಶಾಲೆಯ ಶಿಕ್ಷಕನನ್ನೂ ಕೂಡ ಬಂಧಿಸಲಾಗಿದೆ.
ಬಾಲಕಿ ಮನೆಗೆ ತೆರಳಿದಾಗ ಆಕೆಗೆ ತೀವ್ರ ರಕ್ತಸ್ರಾವವಾಗಿದೆ.. ಇದನ್ನ ಗಮನಿಸಿದ ಕುಟುಂಬಸ್ಥರು ವಿಚಾರಿಸಿದ್ದಾರೆ… ಆದ್ರೆ ಆಗ ಬಾಲಕಿ ಭಯದಿಂದ ಏನೂ ಹೇಳಿಲ್ಲ.. ಆದರೆ ನೋವಿನಿಂದ ನರಳಾಡುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ ಅತ್ಯಾಚಾರವಾಗಿರುವುದು ಬೆಳಕಿಗೆ ಬಂದಿದೆ.. ನಂತರ ಬಾಲಕಿಯನ್ನ ವಿಚಾರಿಸಿದಾಗ ಸತ್ಯ ತಿಳಿಸಿದ್ದಾಳೆ..
ಕೂಡಲೇ ಪೊಲೀಸರು ತೆರಳಿ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲನ ವಿರುದ್ಧ ದೂರು ದಾಖಲಿಸಿದ್ಧಾರೆ..