ಉತ್ತರಪ್ರದೇಶ : ರೋಹಿಂಗ್ಯಾ ನಿರಾಶ್ರಿತರ ಶಿಬಿರ ತೆರವುಗೊಳಿಸಿದ ಸರ್ಕಾರ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರ ಶಿಬಿರ ಹಾಗೂ ಅಕ್ರಮವಾಗಿ ಭೂಮಿಯನ್ನ ಅತಿಕ್ರಮಿಸಿಕೊಂಡು ನಿರ್ಮಿಸಿದ್ದ ಶಿಬಿರಗಳನ್ನು ಅಲ್ಲಿನ ಸರ್ಕಾರವು ತೆರವುಗೊಳಿಸಿದೆ. ದೇಶದ ರಾಜಧಾನಿಗೆ ಹತ್ತಿರದ ನೋಯ್ಡಾದ ಮದನ್ಪುರ್ ಖಾದರ್ ಪ್ರದೇಶದಲ್ಲಿರುವ, ಉತ್ತರಪ್ರದೇಶ ಸರ್ಕಾರದ ನೀರಾವರಿ ಇಲಾಖೆಗೆ ಸೇರಿದ ಅಂದಾಜು 97 ಕೋಟಿ ರೂಪಾಯಿ ಬೆಲೆ ಬಾಳುವ 2.10 ಹೆಕ್ಟೇರ್ ಭೂಮಿಯನ್ನು ರೋಹಿಂಗ್ಯಾ ಸಮುದಾಯದವರು ಅತಿಕ್ರಮಿಸಿಕೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನಿಡಿದ್ಧಾರೆ…
ಹೀಗಾಗಿ ಉತ್ತರಪ್ರದೇಶದ ಜಲಶಕ್ತಿ ಸಚಿವ ಮಹೇಂದ್ರ ಸಿಂಗ್ ಅವರ ಆದೇಶದ ಮೇರೆಗೆ ಅತಿಕ್ರಮಣ ತೆರವುಗೊಳಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ತೆರವು ಕಾರ್ಯಾಚರಣೆಯ ದೃಶ್ಯದ ತುಣುಕನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮದನ್ಪುರ್ ಖಾದರ್ ನಲ್ಲಿರುವ ನೀರಾವರಿ ಇಲಾಖೆಗೆ ಸೇರಿದ 2.10 ಹೆಕ್ಟೇರ್ ಭೂಮಿಯಲ್ಲಿ ರೋಹಿಂಗ್ಯಾ ಸಮುದಾಯದವರ ಅಕ್ರಮ ಶಿಬಿರಗಳನ್ನು ಮುಂಜಾನೆ 4 ಗಂಟೆಗೆ ತೆರವುಗೊಳಿಸಲಾಯಿತು ಎಂದು ಜಲಶಕ್ತಿ ಸಚಿವ ಮಹೇಂದ್ರ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ.