Uttarapradesh : ವೈದ್ಯರ ಮೇಲೆ ದ್ವೇಷ …. ಮಗನನ್ನ ಅಪಹರಿಸಿ ಕೊಂದ ಪಾಪಿಗಳು..
ಉತ್ತರಪ್ರದೇಶ: ಕೆಲಸದಿಂದ ವಜಾಗೊಂಡಿದ್ದ ಆಸ್ಪತ್ರೆ ಸಿಬ್ಬಂದಿ ಇಬ್ಬರು ಅದೇ ಆಸ್ಪತ್ರೆ ವೈದ್ಯರ 8 ವರ್ಷದ ಮಗನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ..
ಬುಲಂದ್‍ಶಹರ್‍ನಲ್ಲಿ ವೈದ್ಯರೊಬ್ಬರು ನೋಂದಣಿಯಾಗದ ಕ್ಲಿನಿಕ್‍ನ್ನು ನಡೆಸುತ್ತಿದ್ದರು. ಅದೇ ಕ್ಲಿನಿಕ್ ನಲ್ಲೇ ನಿಜಾಮ್ ಹಾಗೂ ಶಾಹಿದ್ ಎಂಬ ಬ್ಬರು ಕೆಲಸ ಮಾಡುತ್ತಿದ್ದರು. ಆದ್ರೆ ಅವರು ಮಾಡಿದ ಯಾವುದೋ ತಪ್ಪಿನಿಂದ ಅವರನ್ನ ಕೆಲಸದಿಂದ ಕಿತ್ತೊಗೆಯಲಾಗಿದೆ..

ಇದೇ ಸೇಡು ಅವರ ಮನಸಲ್ಲಿ ಬೇರೂರಿತ್ತು.. ವೈದ್ಯನ ವಿರುದ್ಧ ದ್ವೇಷ ತೀರಿಸಿಕೊಳ್ಳಬೇಕು ಎಂದುಕೊಂಡೇ ಹೊಂಚು ಹಾಕುತ್ತಿದ್ದರು.. ಜೊತೆಗೆ ಕ್ಲಿನಿಕ್ ಕೂಡ ಚನ್ನಾಗಿ ನಡೆಯುತ್ತಿದ್ದನ್ನ ಸಹಿಸಿಕೊಳ್ಳಲಾಗದೇ ಅವರ ಮಗನನ್ನ ಅಪಹರಿಸಿ ಕೊಲೆ ಮಾಡಿದ್ದಾರೆ.
uttarapradesh – son got kidnapped and killed
ಶುಕ್ರವಾರ ಎಷ್ಟೇ ಹೊತ್ತಾದ್ರೂ ಮಗ ಮನೆಗೆ ಬಾರದೇ ಇದ್ದಾಗ ವೈದ್ಯರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳು ಬಾಲಕನಿಗಾಗಿ ಹುಡುಕಾಟ ಆರಂಭಿಸಿದರು,..
ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸುಮಾರು 60 ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದೆ. ನಂತರ ತನಿಖೆ ವೇಳೆ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.. ತನಿಖೆ ವೇಳೆ ಕಿಡಿಗೇಡಿಗಳು ಕತ್ತು ಹಿಸುಕಿ ಮಗುವಿನ ಬಾಯಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.








