ನಿನ್ನ ಪ್ರೀತಿ ಒಪ್ಪಿದ್ದೇವೆ ತಂಗ್ಯವ್ವ… ಮನೆಗೆ ಬಾ ಎಂದ ಅಣ್ಣ ಕೊಟ್ಟ ಗಿಫ್ಟ್ ಏನ್ ಗೊತ್ತಾ..!
ಉತ್ತರಪ್ರದೇಶ: 8 ವರ್ಷಗಳ ಪ್ರೀತಿ ಕೈಬಿಡದೇ ಮನೆಯಲ್ಲಿ ವಿರೋಧವಿದ್ದರೂ ಪ್ರೀತಿಸಿದವನನ್ನೇ ಮದುವೆಯಾಗಿ ಹಾಯಾಗಿ ಸಂಸಾರ ನಡೆಸುತ್ತಿದ್ದ ಯುವತಿ ಕಥೆ ಏನಾಗಿದೆ ಗೊತ್ತಾ… ಉತ್ತರ ಪ್ರದೇಶ ಬಿಟ್ಟು ಪ್ರಿಯತಮ ಜೊತೆ ಮದುವೆಯಾಗಿ ದೆಹಲಿಯಲ್ಲಿ ಸಂಸಾರ ನಡೆಸುತ್ತಿದ್ದ ಆಕೆಯ ದುರಂತ ಅಂತ್ಯ ಆಗಿದ್ದಾದ್ರೂ ಹೇಗೆ ಗೊತ್ತಾ..
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ 23 ವರ್ದ ಚಾಂದಿನಿ ಕಶ್ಯಪ್ ಎಂಬಾಕೆ ಹಾಗೂ 25 ವರ್ಷದ ದಲಿತ ಯುವಕ ಅರ್ಜುನ್ ಕುಮಾರ್ ಎಂಬಾತರು ಸುಮಾರು 8 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಯುವಕ ದಲಿತ ಎಂಬ ಕಾರಣಕ್ಕೆ ಯುವತಿಯ ಮನೆಯರು ಪ್ರೀತಿಯನ್ನ ಒಪ್ಪಿರಲಿಲ್ಲ. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಲಾಕ್ಡೌನ್ ಸಮಯದಲ್ಲಿ ಮದುವೆಯಾಗಿದ್ದರು.
ಪ್ರತಿಭಟನೆಗೆ ಪ್ರಚೋದನೆ : ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
ಆದ್ರೆ ಇತ್ತೀಚೆಗೆ ಮನೆಯರು ಯುವತಿಯ ಜೊತೆಗೆ ಮಾತನಾಡುವ ನಾಟಕ ಮಾಡಿ ಮನೆಗೆ ಬಾ ಎಂದು ಕರೆಸಿಕೊಂಡಿದ್ದಾರೆ. ಆನಂತರ ಆಕೆಗೆ ಚಿತ್ರಹಿಂಸೆ ಕೊಡಲಾರಂಭಿಸಿದ್ದಾರೆ. ಈ ಬಗ್ಗೆ ಯುವತಿ ತನ್ನ ಗಂಡನಿಗೆ ಫೋನ್ ಮೂಲಕ ತಿಳಿಸಿದ್ದಾಳೆ. ಇದಾದ ಬಳಿಕ ಪತ್ನಿಯ ಜೊತೆಗೆ ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆ ಆಕೆಯ ಪತಿ ಅರ್ಜುನ್ ಪೊಲೀಸರಿಗೆ ದೂರು ನೀಡಿದ ಬಳಿಕ ಪತ್ನಿ ಕೊಲೆಯಾಗಿರುವ ಆಘಾತಕಾರಿ ವಿಚಾರ ಗೊತ್ತಾಗಿದೆ.
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ಆಕೆಯ ಅಣ್ಣನೇ ಇನ್ನಿತರರ ಜೊತೆ ಸೇರಿ ಕೊಲೆ ಮಾಡಿ ತಮ್ಮ ಹೊಲದಲ್ಲಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾನಂತೆ. ಈ ನೀಚ ಕೃತ್ಯಕ್ಕೆ ಇಡೀ ಕುಟುಂಬವೇ ಸಾಕ್ಷಿಯಾಗಿದೆ. ಸದ್ಯ ಚಾಂದಿನಿ ಅಣ್ಣ ಹಾಗೂ ಕೊಲೆಗೆ ಸಹಾಯ ಮಾಡಿದ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel