uttarapradesha byelection
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ನಡೆದ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ನವೆಂಬರ್ 3ರಂದು ನಡೆದ ಉಪಚುನಾವಣೆಯ ಮತೆಣಿಕೆ ನಡೆದಿದ್ದು, ಒಟ್ಟು ಆರು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಉಳಿದ ಒಂದು ಸ್ಥಾನ ಸಮಾಜವಾದಿ ಪಕ್ಷದ ಪಾಲಾಗಿದೆ.
ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ನಿಧನದಿಂದ ನೌಗಾಂವ್ ಸದತ್ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸಂಗೀತಾ ಚೌಹಾಣ್ ಗೆದ್ದಿದ್ದಾರೆ.
ಸಚಿವೆ ಕಮಲ್ ರಾನಿ ವರುಣ್ ಅವರ ನಿಧನದಿಂದ ತೆರವಾಗಿದ್ದ ಕಾನ್‌ಪುರ್ ನಗರ ಜಿಲ್ಲೆಯ ಘಟಂಪುರ್ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದ ಉಪೇಂದ್ರ ನಾಥ್ ಪಾಸ್ವಾನ್ ಅವರು ಗೆಲುವಿನ ನಗೆ ಬೀರಿದ್ದಾರೆ.
ತುಂಡ್ಲಾ ಕ್ಷೇತ್ರದಲ್ಲಿ ಶಾಸಕ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಪ್ರೇಮ್ ಪಾಲ್ ದಂಗಾರ್ ಅವರು ಆಯ್ಕೆಯಾಗಿದ್ದಾರೆ.
ಇನ್ನೂ ಉನ್ನಾವ್ ನ ಬಂಗರ್‌ಮೌ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಹಿನ್ನೆಲೆ , ಈ ಕ್ಷೇತ್ರಕ್ಕೆ ನಡೆಸಲಾದ ಉಪಚುನಾವಣೆಯಲ್ಲಿ ಬಿಜಿಪಿ ಅಭ್ಯರ್ಥಿ ಶ್ರೀಕಾಂತ್ ಕಟಿಯಾರ್ ಸ್ಫರ್ಧಿಸಿ ಗೆದ್ದಿದ್ದಾರೆ.
ಇನ್ನೂ ಬುಲಂದ್ ಶಹರ್ ನಲ್ಲಿ ವಿರೇಂದ್ರ ಸಿಂಗ್ ಸಿರೋಹಿ ಅವರ ನಿಧನದಿಂದಾಗಿ ತೆರವುಗೊಂಡಿದ್ದ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾದ ಉಷಾ ಶಿರೋಹಿ ಗೆದ್ದಿದ್ದಾರೆ. ಮತ್ತೊಂದೆಡೆ
ಡಿಯೊರಿಯಾದಲ್ಲಿ ಜನಮೇಜಯ್ ಸಿಂಗ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸತ್ಯಪ್ರಕಾಶ್ ಮಣಿ ತ್ರಿಪಾಟಿ ಆಯ್ಕೆಯಾಗಿದ್ದಾರೆ. ಮಹಲಾನಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಲಕ್ಕಿ ಯಾದವ್ ಅವರು ಗೆದ್ದಿದ್ದಾರೆ. ಪರಸ್ನಾಥ್ ಯಾದವ್ (ಲಕ್ಕಿ ಯಾದವ್ ತಂದೆ) ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಲಕ್ಷ್ಮೀ ಆಯ್ಕೆಯಾಗಿದ್ದಾರೆ.
uttarapradesha byelection
ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel