ಉತ್ತರಖಂಡದಲ್ಲಿ ಹಿಮಸ್ಫೋಟ: ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ, 15 ಮಂದಿ ರಕ್ಷಣೆ..!
ಡೆಹ್ರಾಡೂನ್ : ಉತ್ತರಖಂಡದಲ್ಲಿ ಹಿಮನದಿಸ್ಫೋಟದಲ್ಲಿ ಕಾಣೆಯಾದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಹಿಮನದಿ ಸ್ಫೋಟದ ಬಳಿಕ ಕಣ್ಮರೆಯಾದವರ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಈ ವರೆಗೂ ಅವಶೇಷಗಳಡಿಯಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಅಲ್ದೇ 14 ಮಂದಿಯ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಚಮೋಲಿ ಪೊಲೀಸರು ಮಾಹಿತಿ ನೀಡಿದ್ದು, ಕರ್ಣ ಪ್ರಯಾಗ್ ಮಾರ್ಗದಿಂದ 7 ಹಾಗೂ ತಪೋವನ ಪ್ರದೇಶದಿಂದ 3 ಮೃತದೇಹಗಳನ್ನು ಹೊರತೆಗೆಯಲಾಗಿದೆ. ತಪೋವನದ ಸುರಂಗವೊಂದರಿಂದ 12 ಮಂದಿಯನ್ನು ರಕ್ಷಿಸಲಾಗಿದೆ. ಆ ಮೂಲಕ ಒಟ್ಟಾರೆ ಒಟ್ಟು 30 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿದ್ದಾನೆ ತೆರೆಮರೆಯ ಬಾಡಿಬಿಲ್ಡರ್ : ಆತ್ಮಸ್ಥೈರ್ಯವೇ ಈ ಸಾಧಕ ಆಸ್ತಿ
ಇದೇ ವೇಳೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈನಿ ವಿದ್ಯುತ್ ಯೋಜನೆ ಪ್ರದೇಶದಲ್ಲಿನ ಪ್ರವಾಹ, ಬಂಡೆಗಳು ಮತ್ತು ಭಗ್ನಾವಶೇಷಗಳು ತಪೋವನ ಪ್ರದೇಶದಲ್ಲಿ ಹಾನಿಗೆ ಕಾರಣವಾಗಿವೆ. ವಿಪತ್ತು ನಿರ್ವಹಣಾ ತಂಡಗಳನ್ನು ಒಳಗೊಂಡ ಎಂಐ-17 ಹಾಗೂ ಎಎಲ್‌ಎಚ್ ಹೆಲಿಕಾಪ್ಟರ್‌ಗಳನ್ನು ಡೆಹ್ರಾಡೂನ್ ನಿಂದ ಜೋಶಿಮಠದತ್ತ ಕಳುಹಿಸಿಕೊಡಲಾಗಿದೆ. ವೈಮಾನಿಕ ರಕ್ಷಣಾ, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಇನ್ನೂ ಚಮೋಲಿಯ ತಪೋವನ್ ಅಣೆಕಟ್ಟು ಬಳಿ ಸುರಂಗದಲ್ಲಿ ಸಿಲುಕಿದ್ದ 30 ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ 12 ಜನರನ್ನು ಮತ್ತೊಂದು ಸುರಂಗದಿಂದ ರಕ್ಷಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.
ಉತ್ತರಾಖಂಡ್ ಹಿಮ ದುರಂತ : 12 ಮಂದಿ ಬಲಿ, 170 ಮಂದಿ ನಾಪತ್ತೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel