ಉತ್ತರಖಂಡ ಹಿಮನದಿ ಕುಸಿತ: ವದಂತಿಗಳನ್ನ ಹಬ್ಬಿಸಬೇಡಿ – ಸಿಎಂ..!
ಡೆಹ್ರಾಡೂನ್: ಉತ್ತರಖಂಡ ಹಿಮನದಿ ಕುಸಿತ ಪ್ರಕರಣ ಸಂಬಂಧ ಸುಖಾಸುಮ್ಮನೆ ವದಂತಿಗಳನ್ನ ಹಬ್ಬಿಸಬೇಡಿ ಎಂದು ಉತ್ತರಖಂಡದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಮನವಿ ಮಾಡಿದ್ದಾರೆ.ಅಲ್ದೇ ಇದೇ ವೇಳೆ ರಕ್ಷಣೆಗೆ ನಮ್ಮ ಮೊದಲ ಆಧ್ಯತೆ ಹಿಮ ಸ್ಫೋಟಕ್ಕೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆ, ಜನರ ಜೀವ ಉಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೈಡ್ರೋಪವರ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಸಾಕಷ್ಟು ನೌಕರರು ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಕಣ್ಮರೆಯಾಗಿರುವವರ ಶೋಧ ನಡೆಸುವುದಕ್ಕಾಗಿ ಶ್ವಾನ ದಳವನ್ನೂ ನಿಯೋಜಿಸಲಾಗಿದೆ ಎಂದು ಹೇಳಿದರು. ಅಲ್ಲದೇ ಇಲ್ಲಿವರೆಗೆ 203 ಮಂದಿ ನಾಪತ್ತೆಯಾಗಿದ್ಜು, ಈ ಪೈಕಿ ಈವರೆಗೂ 14 ಮೃತದೇಹಗಳು ಪತ್ತೆಯಾಗಿವೆ. ಚಮೋಲಿಯ ಮತ್ತೊಂದು ಸುರಂಗ ಮಾರ್ಗದಲ್ಲಿ ಇನ್ನೂ 35 ಮಂದಿ ಸಿಲುಕಿರುವ ಶಂಕೆ ಇದ್ದು, ಭರದಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ ಎಂದಿದ್ದಾರೆ.
ಉತ್ತರಾಖಂಡ ಹಿಮಕುಸಿತ: ಸುರಕ್ಷತೆಗೆ ಬಾಲಿವುಡ್ ತಾರೆಯರ ಪ್ರಾರ್ಥನೆ..!
ಉತ್ತರಖಂಡ ಹಿಮಕುಸಿತ: ದುರಂತಕ್ಕೆ ಮಿಡಿದ ಪಂತ್: ರಕ್ಷಣಾ ವೇತನ ದೇಣಿಗೆ
ಉತ್ತರಖಂಡ ಹಿಮನದಿಕುಸಿತ : ಚಮೋಲಿ ಜನರ ಜೊತೆ ನಾನು ನಿಲ್ಲುತ್ತೇನೆ – ರಾಹುಲ್ ಗಾಂಧಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel