V somanna |ಬಿಜೆಪಿಯಿಂದ ಅಂತರ ಕಾಯ್ದುಕೊಂಡ್ರಾ ವಿ.ಸೋಮಣ್ಣ
ಚಾಮರಾಜನಗರ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶ ಹಾಗೂ ಚುನಾವಣೆಗೆ ನಾವು ಸಜ್ಜು ಅಂತಾ ಸಾರಲು ರಾಜ್ಯ ಬಿಜೆಪಿ ಇಂದು ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ನಾಯಕರು ಎಲ್ಲರೂ ಭಾಗಿದ್ದಾರೆ. ಆದ್ರೆ ಸಭೆಯಿಂದ ಸಚಿವ ವಿ ಸೋಮಣ್ಣ ದೂರ ಉಳಿದುಕೊಂಡಿದ್ದಾರೆ.

ಅಂದರೇ ಈ ಬೃಹತ್ ಕಾರ್ಯಕ್ರಮಕ್ಕೆ ವಿ ಸೋಮಣ್ಣ ಗೈರಾಗಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೋಗದೇ ಚಾಮರಾಜನಗರ ಜಿಲ್ಲಾಡಳಿತದ ಭವನದಲ್ಲಿ ಸಭೆ ನಡೆಸಿದ್ದಾರೆ.
ಸಚಿವ ವಿ ಸೋಮಣ್ಣ ಅವರ ಈ ನಡೆ ಅವರು ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡ್ರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.








