`ಶಿವಮೊಗ್ಗದವರ ಜಗಳ ಸರಿ ಇಲ್ವಂತೆ’ : ವಿ. ಸೋಮಣ್ಣ ಹೇಳಿದ್ದು
ಕಲಬುರಗಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಸಿಡಿದಿರೋದು ರಾಜ್ಯದಲ್ಲಿ ಭಾರಿ ಸಂಚಲನವನ್ನ ಸೃಷ್ಠಿ ಮಾಡಿದೆ.
ಈ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಶಿವಮೊಗ್ಗದವರ ಜಗಳ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಸರಿಯಲ್ಲ ಎಂದಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಚಿವ ವಿ. ಸೋಮಣ್ಣ ಮಾತನಾಡಿ, ಶಿವಮೊಗ್ಗದವರ ಜಗಳ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಸರಿಯಲ್ಲ.
ಅವರಿಬ್ಬರೂ ಯಾವ ರೀತಿ ಅಡ್ಜೆಸ್ಟ್ ಆಗ್ತಾರೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಬೇಕು ಅಂತ ನನಗೂ ಬಿಜೆಪಿಗೆ ಕರೆದುಕೊಂಡು ಬಂದಿದ್ದೇ ಈಶ್ವರಪ್ಪ.
ಆದ್ರೆ ಶಿವಮೊಗ್ಗದವರ ಜಗಳ ಈ ಬಾರಿ ಒಂದು ಹೆಜ್ಜೆ ಜಾಸ್ತಿ ಆಗಿದ್ದು ಸರಿಯಿಲ್ಲ. ಇದನ್ನು ಸರಿಪಡಿಸುವ ಕೆಲಸ ರಾಜ್ಯ ಅಧ್ಯಕ್ಷರು ಮಾಡ್ತಾರೆ ಎಂದು ಹೇಳಿದರು.
ಈಶ್ವರಪ್ಪ ಹಿರಿಯರು ಅನುಭವಿಗಳು, ನನಗಿಂತ ಬುದ್ಧಿವಂತರು. ಅವರಿಗೆ ಈಗ ಯಾಕಾಗಿ ನೋವಾಗಿದೆ ಗೊತ್ತಿಲ್ಲ ಎಂದ ಸೋಮಣ್ಣ, ಪೋಸ್ಟಮ್ಯಾನ್ ಆಗಲಾರೆ ಎನ್ನುವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಶ್ವರಪ್ಪನವರು ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ.
ಯಡಿಯೂರಪ್ಪ ಏನು ಮಾಡಿದ್ದಾರೆ. ಈಶ್ವರಪ್ಪ ಏನು ಹೇಳಿದ್ದಾರೆ. ಅನ್ನೋದೆಲ್ಲಾ 17 ರ ನಂತ್ರ ಸಚಿವ ಸಂಪುಟದಲ್ಲಿ ಚರ್ಚಿಸುವೆ ಎಂದು ತಿಳಿಸಿದ್ದಾರೆ.










