ಕೊರೊನಾ ನಿರ್ಮೂಲನೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯುತ್ತಲೇ ಇರುವ ಸಿದ್ದರಾಮಯ್ಯ ಕೊರೊನಾ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ಸೇರಿ ಇನ್ನಿತರೇ ವಿಚಾರಗಳ ಕುರಿತು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ನಡೆಸಿರುವ ವಸತಿ ಸಚಿವ ವಿ ಸೋಮಣ್ಣ ಅವರು “ಸಿದ್ಧರಾಮಯ್ಯನವರೇ ನೀವು ಎಲ್ಲಿಗೆ ಬೇಕಾದ್ರು ಭೇಟಿ ನೀಡಿ, ಹೇಗೆ ಬೇಕಾದ್ರು ಪರಿಶೀಲನೆ ನಡೆಸಿ. ಆದ್ರೆ, ಹುಲಿ ಬಂತು ಹುಲಿ ಎಂದು ಗೊಂದಲ ಸೃಷ್ಟಿಸಬೇಡಿ ಎಂದು ವ್ಯಂಗ್ಯಾಡಿದ್ದಾರೆ. ಇದೇ ವೇಳೆ ಹಿಟ್ ಅಂಡ್ ರನ್ ಮಾಡುವುದನ್ನ ನಿಲ್ಲಿಸಿ ಎಂದು ಹರಿಹಾಯ್ದಿದ್ದಾರೆ. ಸರ್ಕಾರ ತಪ್ಪು ಮಾಡಿದ್ದಾರೆ ಕಿವಿ ಹಿಂಡಿ ಹೇಳಲಿ, ಅದು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.








