ಜ.3ರಿಂದ ಹಾಸನ ಜಿಲ್ಲೆಯಲ್ಲಿ 15-18 ವಯೋಮಾನದ ಮಕ್ಕಳಿಗೆ ವ್ಯಾಕ್ಸಿನ್: ಆರ್.ಗಿರೀಶ್
ಹಾಸನ : ಜ.3ರಿಂದ ಹಾಸನ ಜಿಲ್ಲೆಯಲ್ಲಿ 15-18 ವಯೋಮಾನದ ಮಕ್ಕಳಿಗೆ ವ್ಯಾಕ್ಸಿನ್ ಹಾಕಲಾಗುವುದು. ಜನವರಿ 2007 ರ ಮುಂಚೆ ಹುಟ್ಟಿರುವ ಎಲ್ಲ ಮಕ್ಕಳು ಲಸಿಕೆ ಪಡೆಯಬಹುದು ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಸರಕಾರ ಕೋವ್ಯಾಕ್ಸಿನ್ ಮಾತ್ರ ನೀಡಲು ತಿಳಿಸಿದೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯ 175 ಕಾಲೇಜುಗಳಿಂದ 33 ಸಾವಿರಕ್ಕೂ ಹೆಚ್ಚು ಮಕ್ಕಳ್ಳು ಮತ್ತು 564 ಶಾಲೆಗಳಲ್ಲಿ 9 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ 45 ಸಾವಿರ ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಮುಂದುವರೆದು 1000 ಹೆಚ್ಚು ಇತರೇ ಮಕ್ಕಳನ್ನು ಗುರುತಿಸಲಾಗಿದೆ, ಒಟ್ಟು ಜಿಲ್ಲೆಯಲ್ಲಿ 79 ಸಾವಿರ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಆಯಾ ಶಾಲಾ-ಕಾಲೇಜುಗಳಲ್ಲೇ ಲಸಿಕೆ ನೀಡಲಾಗುತ್ತದೆ. ಪೋಷಕರು, ಮಕ್ಕಳು ಹೆದರದೆ ಲಸಿಕೆ ಪಡೆಯ ಬೇಕೆಂದು ಮನವಿ ಮಾಡಿಕೊಂಡರು. ಜಿಲ್ಲೆಯಲ್ಲಿ ಶೇ.98 ಮೊದಲ ಡೋಸ್, ಶೇ.83 ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.