ಕಾಮಿಡಿ ನಟ ವಡಿವೇಲುಗೆ ಒಮಿಕ್ರಾನ್ ಸೋಂಕು..?
ಚೆನ್ನೈ : ತಮಿಳಿನ ಸ್ಟಾರ್ ಕಾಮಿಡಿಯನ್ ವಡಿವೇಲು ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.. ಈ ನಡುವೆ ವಡಿವೇಲು ಅವರಿಗೆ ಕೊರೊನಾ ರೂಪಾಂತರಿ ಒಮಿಕ್ರಾನ್ ಇರುವ ಶಂಕೆ ವ್ಯಕ್ತವಾಗಿದೆ..
ವಡಿವೇಲು ಅವರು ಇತ್ತೀಚೆಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರೆ. ಸೋಂಕು ಅಲ್ಲಿಂದಲೇ ವಡಿವೇಲು ಅವರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ತಮಿಳಿನ ನಾಯಿ ಶೇಖರ್ ರಿಟರ್ನ್ಸ್ ಚಿತ್ರದ ಚಿತ್ರೀಕರಣಕ್ಕೆಂದು ವಡಿವೇಲು ಅವರು ಲಂಡನ್ ಗೆ ತೆರಳಿದ್ದರು. ವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ವಡಿವೇಲು ಮನೆಯವರು ತಿಳಿಸಿದ್ದಾರೆ.
ವಡಿವೇಲು ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ವಡಿವೇಲು ಅವರಿಗೆ ಓಮಿಕ್ರಾನ್ ಸೋಂಕು ಕೂಡ ತಗುಲಿರುವ ಶಂಕೆ ವ್ಯಕ್ತವಾಗಿದೆ. ವಡಿವೇಲು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ನಾಯಿ ಶೇಖರ್..








