ನಾಳೆ ವೈಕುಂಠ ಏಕಾದಶಿ: ಇಸ್ಕಾನ್ ನಲ್ಲಿ ಭಕ್ತರಿಗಿಲ್ಲ ಪ್ರವೇಶ..!
ಬೆಂಗಳೂರು: ನಾಳೆ ವೈಕುಂಠ ಏಕಾದಶಿ. ಪ್ರತಿವರ್ಷ ಎಲ್ಲೆಡೆ ರಾಮ, ವಿಷ್ಣು , ಕೃಷ್ಣ , ಗೋವಿಂದನ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನ ಅತ್ಯಂತ ವಿಜೃಂಭಣೆಯಿಂದ ವೈಭವದಿಂದ ಆಚರಣೆ ಮಾಡಲಾಗ್ತತಿತ್ತು. ಯಾವ ದೇವಾಲಯ ನೊಡಿದ್ರೂ ಆವರಣದಲ್ಲಿ ಕಾಲಿಡೋದಕ್ಕೂ ಜಾಗವಿರುತ್ತಿರಲಿಲ್ಲ ಅಷ್ಟು ಜನಜಾತ್ರೆ ಇರುತ್ತಿತ್ತು.
ಕೊರೊನಾ ಸೋಂಕಿನ ಭೀತಿ : ಪರಿವಾರಕ್ಕಾಗಿ ಸೆಲ್ಫ್ ಕ್ವಾರಂಟೈನಲ್ಲಿ ‘ರಾಖಿ ಭಾಯ್’..!
ಆದ್ರೆ ಈ ಬಾರಿ ಮಹಾಮಾರಿ ಕೊರೋನಾದಿಂದಾಗಿ ಏಕಾದಶಿಯನ್ನ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗ್ತಿದೆ. ಇನ್ನೂ ಸರಳವಾಗಿ ಏಕಾದಶಿ ಆಚರಣೆ ಮಾಡಲಾಗ್ತಿದ್ದು, ಪ್ರಸಿದ್ಧ ಇಸ್ಕಾನ್ ದೇವಾಲಯ ಸೇರಿದಂತೆ ಹಲವೆಡೆ ಭಕ್ತರಿಗೆ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಹೌದು ಕೊರೋನಾ ಕಾರಣದಿಂದಾಗಿ ನಾಳಿನ ವೈಕುಂಠ ಏಕಾದಶಿಯಂದು ಹಲವು ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿಲ್ಲ. ಬೆಂಗಳೂರಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗ್ತಿದೆ.
80ರ ವೃದ್ಧನ ಹೊಟ್ಟೆಯಲ್ಲಿ 2,215 ಕಲ್ಲುಗಳು ಪತ್ತೆ
ಸಾಂಪ್ರದಾಯಿಕವಾಗಿ ಸರ್ಕಾರದ ಆದೇಶದಂತೆ ಪೂಜೆಗಳು ನಡೆದರೂ , ಭಕ್ತರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ಇಸ್ಕಾನ್ ದೇವಾಲಯದಲ್ಲಿ ಭಕ್ತರಿಗೆ ಆನ್ಲೈನ್ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಅಧಿಕೃತ ವೆಬ್ ಸೈಟ್ ನಲ್ಲಿ ನೇರ ಪ್ರಸಾರವನ್ನು ನೋಡಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel