ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿ ಬಿಗ್ ಬಾಸ್ ನಲ್ಲೂ ತಮ್ಮದೇ ವಿಭಿನ್ನ ವ್ಯಕ್ತಿತ್ವದಿಂದ ಎಲ್ಲರ ಅಚ್ಚುಮೆಚ್ಚಾಗಿ ಈಗ ಸ್ಯಾಂಡಲ್ ವುಡ್ ಗೂ ಪ್ರವೇಶ ಪಡೆದಿರುವ ಚೆಂದುಳ್ಳಿ ಚೆಲುವೆ ಗುಳಿ ಕೆನ್ನೆ ಹುಡುಗಿ ನಟಿ ವಿಷ್ಣವಿ ಗೌಡ ಸಕಲ ಕಲಾವಲ್ಲಭರು ಅನ್ನೋದರಲ್ಲಿ ಎರೆಡು ಮಾತಿಲ್ಲ..
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ರ ಆಗಿರುವ ವೈಷ್ಣವಿ ಇತ್ತೀಚೆಗೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ರಾ.. ರಾ… ರಕ್ಕಮ್ಮ ಹಾಡಿಇಗೆ ಕುಣಿದು ಕುಪ್ಪಳಿಸಿದ್ದರು.. ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದರು..
ಈಗ ವೈಷ್ಣವಿ ಗೌಡ ಮಸ್ತ್ ಬೆಲ್ಲಿ ಡ್ಯಾನ್ಸ್ ಮಾಡಿ ಅಭಿಮಾನಿಗಳು ವಾವ್ ಎನ್ನುವಂತೆ ಮಾಡಿದ್ದಾರೆ. ರೀಲ್ ಮಾಡಿರುವ ವೈಷ್ಣವಿ ತಮಿಳಿನ ಬೀಸ್ಟ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಒಡವೆ ತೊಟ್ಟು ಅಲಂಕಾರ ಮಾಡಿಕೊಂಡು ಅರಬ್ ಹುಡುಗಿಯಂತೆಯೇ ಕಂಡಿದ್ದಾರೆ..