ವಾಜಪೇಯಿ ಮತ್ತು ಪ್ರಣಬ್ – ಎ ಮ್ಯಾನ್ ಆಫ್ ಆಲ್ ಸೀಸನ್ಸ್
ಹೊಸ ದಿಲ್ಲಿ, ಸೆಪ್ಟೆಂಬರ್02: ಭಾರತ ರತ್ನ ವಾಜಪೇಯಿ ಮತ್ತು ಪ್ರಣಬ್ ಮುಖರ್ಜಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಉತ್ತಮ ಬಾಂಧವ್ಯವನ್ನು ಹಂಚಿ ಕೊಂಡವರು. ಹಿರಿಯ ರಾಜಕೀಯ ಮುತ್ಸದ್ದಿಗಳು, ಅಜಾತ ಶತ್ರು ಎಂದು ಕರೆಸಿಕೊಂಡಿದ್ದವರು. ಕೆಲವೊಮ್ಮೆ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಆದರೆ ಇಂದಿರಾ ಗಾಂಧಿ 1982 ರ ಜನವರಿಯಲ್ಲಿ ಪ್ರಣಬ್ ಅವರನ್ನು ಹಣಕಾಸು ಸಚಿವರಾಗಿ ಆಯ್ಕೆ ಮಾಡಿದಾಗ, ಅಟಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಅನುಚಿತವೆಂದು ಕರೆದರು.
ಈ ವಿಚಾರವಾಗಿ ಆಗಿನ ಲೋಕಸಭಾ ಸ್ಪೀಕರ್‌ಗೆ ದೂರು ಕೂಡ ವಾಜಪೇಯಿ. ಮುಖರ್ಜಿ ಲೋಕಸಭಾ ಸಂಸದರಲ್ಲ ಮತ್ತು ಆದ್ದರಿಂದ ಅವರು ಮಂಡಿಸುವ ಹಣಕಾಸು ಮಸೂದೆಗಳಲ್ಲಿ ಅವರಿಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂಬುದು ಅವರ ವಾದವಾಗಿತ್ತು.
ಬಿಜೆಪಿಯ ಅನುಭವಿ ಅಟಲ್ ಅವರ ವಾದವು, ಹಣಕಾಸು ಮಸೂದೆಗಳು ಮತ್ತು ಸ್ವಾಧೀನ ಮಸೂದೆಗಳನ್ನು ಸದನದಲ್ಲಿ ಮಂಡಿಸಿದಾಗ ಸಂಸತ್ ಸದಸ್ಯರಿಗೆ ಮಾತ್ರ ಮತ ಚಲಾಯಿಸಲು ಅರ್ಹತೆ ಇರುತ್ತದೆ ಆದರೆ ಈ ನೇಮಕಾತಿ ಪ್ರಣಬ್ ಗೆ ತೊಡಕಾಗುತ್ತದೆ ಎಂದು ಆಗಿತ್ತು
ಹಣಕಾಸು ಸಚಿವರು ಯಾವಾಗಲೂ ಲೋಕಸಭೆಯ ಸದಸ್ಯರಾಗಿರುತ್ತಾರೆ. ಈ ವಾದದಲ್ಲಿ ಹುರುಳಿಲ್ಲ ಎಂದು ಈ ವಾದವನ್ನು ಸ್ವೀಕರ್ ತಳ್ಳಿಹಾಕಿದರು.
ಈ ಬಗ್ಗೆ ಪತ್ರಕರ್ತ-ಜೀವನಚರಿತ್ರೆಕಾರ ಕಿಂಗ್‌ಶುಕ್ ನಾಗ್ ಅವರು ‘ಅಟಲ್ ಬಿಹಾರಿ ವಾಜಪೇಯಿ: ಎ ಮ್ಯಾನ್ ಆಫ್ ಆಲ್ ಸೀಸನ್ಸ್’ ನಲ್ಲಿ ಮಾಜಿ ಪ್ರಧಾನ ಮಂತ್ರಿ ಬೇರೆಯವರಿಗೆ ಎಂದಿಗೂ ಸಮಸ್ಯೆಗಳು ಸಂಭವಿಸದಂತೆ ಜಾಣತನ ಹೊಂದಿದ್ದರು ಎಂದು ಬಣ್ಣಿಸಿದ್ದಾರೆ.
ವಾಜಪೇಯಿ ಮತ್ತು ಮುಖರ್ಜಿ ಇಬ್ಬರೂ ಪರಸ್ಪರ ಗೌರವವನ್ನು ಹಂಚಿಕೊಂಡವರು ಪಕ್ಷಾತೀತವಾಗಿ ಇಬ್ಬರೂ ಉನ್ನತ ಗೌರವವನ್ನು ಹೊಂದಿದ್ದರು.
ಅದೊಂದು ದಿನ ಮುಖರ್ಜಿ ಸಂಸತ್ತಿನಲ್ಲಿ ಹಿಂದೂ ದೇವರ ಪದ್ಧತಿಗಳ ಬಗ್ಗೆ ವಾದ ಮಂಡಿಸಿ ಜೋಶಿ ಅವರಿಗೆ ಸವಾಲು ಹಾಕಿದರು. ಮುಖರ್ಜಿ ಅವರು ಇಂಗ್ಲಿಷ್ ಅನುವಾದಗಳೊಂದಿಗೆ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದರು. ಆಗ ಮಧ್ಯ ಪ್ರವೇಶಿಸಿದ ಅಟಲ್ ಜೀ, ಧಾರ್ಮಿಕ ವಿಷಯಗಳಲ್ಲಿ ನಿಮ್ಮೊಂದಿಗೆ ವಾದಕ್ಕೆ ಇಳಿಯದಂತೆ ಜೋಶಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಪ್ರಣಬ್ ಅವರಿಗೆ ಮನವರಿಕೆ ಮಾಡಿದರು. ನಿಮಗೆ ಧರ್ಮಗ್ರಂಥಗಳ ಬಗ್ಗೆ ಆಳವಾದ ಪಾಂಡಿತ್ಯವಿದೆ ಎಂದು ಅವರಿಗೆ ತಿಳಿದಿಲ್ಲ ಎಂದು ಹೇಳಿರುವ ವಿಚಾರ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.