vajubayi vala
ಬೆಂಗಳೂರು : ಇಂದು ಇಡೀ ದೇಶಾದ್ಯಂತ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ದೀಪಾವಳಿ ಮೆರಗು ಜೋರಾಗಿಯೇ ಇದೆ. ಕೊರೊನಾ ಸಂಕಷ್ಟದ ನಡುವೆಯೂ ದೀಪಾವಳಿ ಹಬ್ಬ ಕಳೆಗುಂದಿಲ್ಲ. ರಾಜ್ಯದಲ್ಲೂ ಸಡಗರ ಸಂಭ್ರಮ ಮನೆಮಾಡಿದೆ. ಪ್ರತಿ ಮನೆಗಳಲ್ಲೂ ದೀಪಾವಳಿ ಹಬ್ಬವನ್ನ ಆಚರಣೆ ಮಾಡಿ ಜನರು ಸಂಭ್ರಮಿಸುತ್ತಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನ ಬರಮಾಡಿಕೊಳ್ಳುವ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಕರ್ನಾಟಕ ರಾಜ್ಯಪಾಲರು ಜಹ ರಾಜ್ಯದ ಜನತೆಗೆ ವಿಶೇಷವಾಗಿ ಶುಭಹಾರೈಸಿದ್ದಾರೆ. ಅಂದ್ಹಾಗೆ ವಜುಬಾಯಿ ವಾಲಾ ಅವರು ಕನ್ನಡಲ್ಲಿಯೇ ದೀಪಾವಳಿ ಹಬ್ಬದ ಶುಭ ಕೋರಿ ಕನ್ನಡಿಗರ ಮನಗೆದ್ದಿದ್ದಾರೆ.
ಈ ಕುರಿತಂತೆ ದೀಪಾವಳಿ ಸಂದೇಶ ರವಾನಿಸಿರುವ ರಾಜ್ಯಪಾಲರು, ‘ದೀಪಾವಳಿ ಶುಭ ಸಂದರ್ಭದಲ್ಲಿ, ಕರ್ನಾಟಕದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ. ಈ ದೀಪಾವಳಿ ಹಬ್ಬವು ಎಲ್ಲ ಸವಾಲುಗಳನ್ನು ಎದುರಿಸಲು ಮತ್ತು ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಹಾಗೂ ಪ್ರಗತಿ ಮತ್ತು ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ನಮಗೆ ಪ್ರೇರಣೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. ಅಲ್ಲದೇ ‘ದೀಪಗಳ ಹಬ್ಬವು ನಮ್ಮೆಲ್ಲರನ್ನು ಕತ್ತಲೆಯಿಂದ ಬೆಳಕಿಗೆ ಮತ್ತು ಬಡತನದಿಂದ ಸಮೃದ್ಧಿಯ ಕಡೆಗೆ ಸಾಗಲು ಪ್ರೇರಣೆ ನೀಡುತ್ತದೆ. ಸಹಾನುಭೂತಿ, ದಯೆ, ಪ್ರೀತಿ ಮತ್ತು ಸದಾಚಾರದ ದೀಪಗಳು ನಮ್ಮ ಮನಸ್ಸಿನಲ್ಲಿ ಮತ್ತು ಹೃದಯಗಳಲ್ಲಿ ಬೆಳಗಲಿ. ಕರ್ನಾಟಕ ರಾಜ್ಯದ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುವುದರ ಜೊತೆಗೆ, ಸಮಾಜದಲ್ಲಿ ಪ್ರತಿಯೊಬ್ಬರೂ ಮಾಲಿನ್ಯರಹಿತ ಮತ್ತು ಶಬ್ದಮುಕ್ತ ದೀಪಾವಳಿ ಆಚರಣೆ ಮಾಡಬೇಕು ಎಂದು ಮನವಿ ಮಾಡುತ್ತೇನೆ. ದೀಪಾವಳಿ ಹಬ್ಬವು ಎಲ್ಲರಿಗೂ ಸಂತೋಷವನ್ನು ನೀಡಲಿ’ ಎಂದು ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭಹಾರೈಸಿದ್ದಾರೆ.
vajubayi vala
ಭಾರತವನ್ನ ಕೆಣಕಿದ ಪಾಕ್ ಗೆ ತಕ್ಕ ಪಾಠ ಕಲಿಸಿದ ‘ಭಾರತೀಯ ಸೇನೆ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel