ಏಪ್ರಿಲ್ 9ರಂದು ಥಿಯೇಟರ್ ಗಳಿಗೆ ಬರುತ್ತಿದ್ದಾರೆ ‘ವಕೀಲ್ ಸಾಬ್’ ..!
ರಾಜಕೀಯದಲ್ಲಿ ಸಕ್ರಿಯವಾದ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಪವನ್ ಕಲ್ಯಾಣ್ ಇದೀಗ ಮತ್ತೆ ಬಣ್ಣ ಹಚ್ಚಿರುವ ಸಿನಿಮಾ ‘ವಕೀಲ್ ಸಾಬ್’. ಬರೋಬ್ಬರಿ 3 ವರ್ಷಗಳ ಗಗ್ಯಾಪ್ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡ್ತಿರುವ ಪವನ್ ಕಲ್ಯಾಣ್ ನಟನೆಯ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಯಾವಾಗ ಸಿನಿಮಾ ರಿಲೀಸ್ ಆಗಲಿದೆ ಅಂತ ಪವರ್ ಸ್ಟಾರ್ ಫ್ಯಾನ್ಸ್ ಕಾಯ್ತಾಯಿದ್ದಾರೆ.
‘ಆದಿಪುರುಷ್’ ಗೆ ಸ್ಟಾರ್ ನಟಿ ಎಂಟ್ರಿ : ಯಾರು ಗೊತ್ತಾ..!
ಇದೀಗ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂದ್ಹಾಗೆ ಏಪ್ರಿಲ್ 9ರಂದು ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಾಯಿದೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಾಗಲ್ಲ ಸೇರಿ ಹಲವು ಕಲಾವಿದರು ಅಭಿನಯಿಸಿದ್ದು, ಶ್ರುತಿ ಹಾಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel