‘ವಕೀಲ್ ಸಾಬ್’ ಮುಂದೆ ‘ಬಾಹುಬಲಿ’ಯ ರೆಕಾರ್ಡ್ ಪೀಸ್ ಪೀಸ್..!
ಇತ್ತೀಚೆಗಷ್ಟೇ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಈ ಟ್ರೇಲರ್ ಯೂಟ್ಯೂಬ್ ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ.. ರಾಜಕೀಯ ಅಖಾಡಕ್ಕೆ ಇಳಿದ ಮೇಲೆ ಬಣ್ಣದ ಲೋಕದಿಂದ ದೂರಾಗಿದ್ದ ಪವನ್ ಕಲ್ಯಾಣ್ ಮತ್ತದೇ ಖದರ್ ನ ಮೂಲಕ 3 ವರ್ಷಗಳ ನಂತರ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಇನ್ನೂ ವಕೀಲ್ ಸಾಬ್ ಸಿನಿಮಾದ ಮೇಲೆ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಹೈ ಎಕ್ಸ್ ಪೆಕ್ಟೇಶನ್ಸ್ ಇದೆ.
ಹೀಗಿರೋವಾಗ ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದು ರೆಕಾರ್ಡ್ ಮಾಡಿದೆ. ಆದ್ರೆ ವಿಶೇಷ ಅಂದ್ರೆ ಈ ಸಿನಿಮಾ ಬಾಹುಬಲಿ ಸಿನಿಮಾದ ದಾಖಲೆಯನ್ನೇ ಪೀಸ್ ಪೀಸ್ ಮಾಡಿದೆ. ಹೌದು ಬಾಹುಬಲಿ 2 ಟ್ರೈಲರ್ ಹೆಸರಿನಲ್ಲಿದ್ದ ಆಲ್ ಟೈಂ ದಾಖಲೆಯನ್ನು ವಕೀಲ್ ಸಾಬ್ ಮುರಿದಿದೆ. ರಾಜಮೌಳಿ ದಾಖಲೆ ಬದಿಗಟ್ಟಲು ಪವನ್ ಕಲ್ಯಾಣ್ ಸಿನಿಮಾ ಬಬರಬೇಕಾಯ್ತು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ಪವನ್ ಕಲ್ಯಾಣ್ ಫ್ಯಾನ್ಸ್ ಖುಷಿ ಪಡುತ್ತಿದ್ದಾರೆ.
ಅಂದ್ಹಾಗೆ ಬಾಹುಬಲಿ 2 ಟ್ರೈಲರ್ 24 ಗಂಟೆಯಲ್ಲಿ 4 ಲಕ್ಷದ 97 ಸಾವಿರ ಲೈಕ್ ಪಡೆದಿತ್ತು. ವಕೀಲ್ ಸಾಬ್ ಟ್ರೈಲರ್ ಗೆ ಕೇವಲ 24 ಗಂಟೆಯಲ್ಲಿ ಬರೋಬ್ಬರಿ 1 ಮಿಲಿಯನ್ ( 10 ಲಕ್ಷ) ಲೈಕ್ಸ್ ಸಿಕ್ಕಿದೆ. ಈ ಮೂಲಕ ಲೈಕ್ಸ್ ವಿಚಾರದಲ್ಲಿ ಬಾಹುಬಲಿಯನ್ನು ಹಿಂದಿಕ್ಕಿದೆ ವಕೀಲ್ ಸಾಬ್…
ಅಂದ್ಹಾಗೆ ವಕೀಲ್ ಸಾಬ್ ಸಿನಿಮಾ ಹಿಂದಿಯ ಪಿಂಕ್ ಚಿತ್ರದ ರೀಮೇಕ್ ಆಗಿದೆ. ಸಿನಿಮಾಗೆ ವೇಣು ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ರೆ, ಬೋನಿ ಕಪೂರ್, ದಿಲ್ ರಾಜು ಬಂಡವಾಳ ಹೂಡಿದಿದ್ಧಾರೆ. ಪ್ರಕಾಶ್ ರಾಜ್, ಶ್ರುತಿ ಹಾಸನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದಿ ಬಿಗ್ ಬುಲ್ ನಲ್ಲಿ ಹರ್ಷ ಮೆಹ್ತಾವನ್ನು ವೈಟ್ವಾಶ್ ಮಾಡಲು ಯಾವುದೇ ಪ್ರಯತ್ನವಿಲ್ಲ – ಅಭಿಷೇಕ್ ಬಚ್ಚನ್
ಅದೇ ಗ್ರೇಸು… ಅದೇ ಸ್ಟೈಲು… ಆಚಾರ್ಯ ಸಾಂಗ್ ಪ್ರೋಮೋ ರಿಲೀಸ್..!
U/A ಸರ್ಟಿಫಿಕೆಟ್ ಪಡೆದ ‘ನಿನ್ನ ಸನಿಹಕೆ’ ಸಿನಿಮಾ..!