ವ್ಯಾಲೆಂಟೈನ್ಸ್ ಡೇಗೆ ಮತ್ತೊಮ್ಮೆ ರಿಲೀಸ್ ಆಗ್ತಿದೆ ನೋಡಿ ‘ದಿಯಾ’..!
2020ರಲ್ಲಿ ರಿಲೀಸ್ ಆಗಿ ಪ್ರೇಕ್ಷರಿಂದ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಮತ್ತೊಮ್ಮೆ ರಿಲೀಸ್ ಆಗಿದ್ದ 2 ಸಿನಿಮಾಗಳು ಅಂದ್ರೆ ಅವು ಲವ್ ಮಾಕ್ಟೇಲ್ ಮತ್ತು ದಿಯಾ.. ಇದೀಗ ನಾಳೆ ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆಯಿರುವ ಹಿನ್ನೆಲೆ ಮತ್ತೊಮ್ಮೆ ಸೂಪರ್ ಹಿಟ್ ಸಿನಿಮಾ ದಿಯಾ ಮತ್ತೊಮ್ಮೆ ರಿಲೀಸ್ ಆಗಲಿದೆ. ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಸಿನಿಮಾವನ್ನು ರಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಪೃಥ್ವಿ ಅಂಬರ್ ನೀವು ಗೆಲ್ಲಿಸಿದ ಸಿನಿಮಾ ದಿಯಾ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮತ್ತು ಚಿತ್ರಮಂದಿರಗಳ ಮಾಲಿಕರ ಬೇಡಿಕೆ ಮೇರೆಗೆ ಸಿನಿಮಾ ಮತ್ತೊಮ್ಮೆ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ನೋಡಿ ಎಂದು ಹೇಳಿದ್ದಾರೆ.
ಖ್ಯಾತ ಖಳನಟ ಸತ್ಯಜಿತ್ ವಿರುದ್ಧ ಸ್ವಂತ ಮಗಳಿಂದಲೇ ದೂರು ದಾಖಲು..!
ಅಂದ್ಹಾಗೆ ರೊಮ್ಯಾಂಟಿಕ್ ಫೀಲಿಂಗ್ ಎಮೋಷನಲ್ ಕಥೆ ಹೊಂದಿದ್ದ ಈ ಸಿನಿಮಾಗೆ ಚಿತ್ರಪ್ರೇಕ್ಷಕರು ಫಿದಾ ಆಗಿದ್ದರು. ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲಿ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಪ್ರದರ್ಶನ ರದ್ದು ಮಾಡಬೇಕಾಯಿತು. ಬಳಿಕ ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ ಲೈನ್ ನಲ್ಲೂ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡರೇ, ನಾಯಕಿಯಾಗಿ ಖುಷಿ ರವಿ ಮಿಂಚಿದ್ದಾರೆ. ದಿಯಾ ಸಿನಿಮಾಗೆ ಅಶೋಕ್ ಆಕ್ಷನ್ ಕಟ್ ಹೇಳಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








