ಪ್ರೇಮಿಗಳ ದಿನಾಚರಣೆ ಹಿನ್ನೆಲೆ ದೇಶದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ಇಂಡಿಗೊ ತನ್ನ ಪ್ರಯಾಣಿಕರಿಗೆ ಬಂಪರ್ ಆಫರ್ ಘೋಷಿಸಿದೆ. ಇಂಡಿಗೊ ದೇಶೀಯ ಪ್ರಯಾಣಿಕರಿಗಾಗಿ 4 ದಿನಗಳ ವಿಶೇಷ ವ್ಯಾಲೆಂಟೈನ್ ಆಫರ್ ಘೋಷಿಸಿದೆ. ಇದಕ್ಕಾಗಿ ಇಂಡಿಗೊ 10 ಲಕ್ಷ ಸೀಟುಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ.
ಇಂಡಿಗೊದ ಈ ಪ್ರಸ್ತಾಪದಡಿ ನೀವು ಕೇವಲ 999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು. ಫೆಬ್ರವರಿ 14ರವರೆಗೆ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಿದೆ. ಪ್ರಯಾಣಿಕರು ಈಗ ಬುಕ್ ಮಾಡಿದ ಟಿಕೆಟ್ ನಲ್ಲಿ ಮಾರ್ಚ್ 1ರಿಂದ ಸೆಪ್ಟೆಂಬರ್ 30ರವರೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರು ಈ ಆಫರ್ ಸದುಪಯೋಗ ಪಡಿಸಿಕೊಳ್ಳಲು ಇಂಡಸ್‍ಇಂಡ್ ಬ್ಯಾಂಕ್, ಎಚ್‍ಡಿಎಫ್‍ಸಿ ಪೇ ಜಾಪ್ ಮತ್ತು ಫೆಡರಲ್ ಬ್ಯಾಂಕ್‍ನಿಂದ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಈಗಾಗಲೇ ಪ್ರಯಾಣಿಕರಿಗೆ ಬುಕ್ಕಿಂಗ್ ಶುರು ಮಾಡಿದೆ. ಈ ಬ್ಯಾಂಕ್‍ಗಳಲ್ಲಿ ಟಿಕೆಟ್ ಬುಕ್ಕ್ ಮಾಡಿದರೆ ಹೆಚ್ಚುವರಿ ಕ್ಯಾಶ್ ಬ್ಯಾಕ್ 5000 ರೂಪಾಯಿ ಕೂಡ ಸಿಗಲಿದೆ. httt:/www.goindigo.in/content/indigo/in/en/sale.html ನಲ್ಲಿ ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.








