ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation Scam) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ(ED) ಅಧಿಕಾರಿಗಲು ಮಾಜಿ ಸಚಿವ ನಾಗೇಂದ್ರ (B Nagendra) ಆಪ್ತರ ಮನೆ ಮೇಲೆ ಬುಧವಾರ ದಾಳಿ ನಡೆಸಿ,ಪರಿಶೀಲನೆ ನಡೆಸಿದ್ದಾರೆ. ನಾಗೇಂದ್ರ ಆಪ್ತ ವಿಜಯ ಕುಮಾರ್ ಮನೆ ಮೇಲೆಯೂ ಇ.ಡಿ ದಾಳಿ ನಡೆಸಿದೆ. ಬಳ್ಳಾರಿಯಲ್ಲಿ ನಾಗೇಂದ್ರ ಅವರಿಗೆ ಹತ್ತಿರವಾಗಿರುವ ಸುಮಾರು ನಾಲ್ಕು ಜನ ಆಪ್ತರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನಾಗೇಂದ್ರ ಆಪ್ತ ಸಂಬಂಧಿ ಎರ‍್ರಿಸ್ವಾಮಿಮನೆ ಸೇರಿದಂತೆ ಕೆಲ ಸಹಾಯಕರು ಹಾಗೂ ಆಪ್ತರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಬಹುತೇಕ ಪೂರ್ಣಗೊಂಡಿದೆ. ಜಾರ್ಜ್‌ಶೀಟ್ ಸಲ್ಲಿಕೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಅಧಿಕಾರಿಗಳು ದಾಳಿಯನ್ನು ಚುರುಕುಗೊಲಿಸಿದಾರೆ.







