ವರಮಹಾಲಕ್ಷ್ಮಿ ವ್ರತ
31-07-2020…ಶುಕ್ರವಾರ
ಶ್ರವಣ ಮನನ ವ್ರತ ನಿಯಮ ಆಚರಣೆಗಳಿಗೆ ಹೇಳಿ ಮಾಡಿಸಿದಂತಿದೆ ಶ್ರಾವಣ ಮಾಸ…
ಜುಲೈ 31, ಶುಕ್ರವಾರದಂದು ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತ
ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತವು ಈ ತಿಂಗಳಿನಲ್ಲಿ ಪ್ರಮುಖವಾದುದು .
ಶ್ರಾವಣ ಹುಣ್ಣಿಮೆಗೆ ಸಮೀಪದ ಶುಕ್ರವಾರ ಅಂದರೆ ಶ್ರಾವಣ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಂದು” ವಿಶೇಷವಾಗಿ ದೇವಾಲಯಗಳಲ್ಲಿ ಮುತ್ತೈದೆಯರು ಸಂಘಟಿತರಾಗಿ , ಶ್ರದ್ಧಾ ಭಕ್ತಿಗಳಿಂದ ಈ ಪೂಜೆ ವರ್ಷದಿಂದ ವರ್ಷಕ್ಕೆ ಸಡಗರದಲ್ಲಿ ಆಚರಿಸುವುದನ್ನು ನಾವು ಕಾಣುತ್ತಿದ್ದೇವೆ . ನಿಜಕ್ಕೂ ಇದೊಂದು ಶುಭ ಲಕ್ಷಣ . ಭವಿಷ್ಟೋತ್ತರ ಪುರಾಣದಲ್ಲಿ ಪಾರ್ವತಿ – ಪರಮೇಶ್ವರರ ಸಂಭಾವಣಾ ರೂಪದಲ್ಲಿ ಈ ವ್ರತ ಕಥೆ ಹೃದಯಂಗಮವಾಗಿ ವರ್ಣಿಸಲ್ಪಟ್ಟಿದೆ . ಇದೇ ವಿವರಗಳನ್ನು ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಅರುಹಿದ ವಿಚಾರ ಜನ ಜನಿತವಾದುದು . (ಇದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ)
“ ವ್ರತಾನಾಮುತ್ತಮಂ ಕಾಮ್ಯಂ ಸರ್ವ ಸೌಭಾಗ್ಯ ಕಾರಣಮ್
ಸರ್ವ ಸಂಪತ್ಪದಂ ಕೀರ್ತಿ ಪುತ್ರ ಪೌತ್ರ ಪ್ರವರ್ಧನಂ ” ವ್ರತಗಳಲ್ಲಿಯೇ ಸರ್ವಶ್ರೇಷ್ಠವಾದುದು ವರಮಹಾಲಕ್ಷ್ಮೀವ್ರತ . ಇಷ್ಟಾರ್ಥ ಪಡೆದುಕೊಳ್ಳುವ ಆಚರಣೆಯಿದು. ಜ್ಞಾನ , ಭಕ್ತಿ , ವೈರಾಗ್ಯಗಳ ಜೊತೆಗೆ ಸಕಲ ಸಂಪತ್ತನ್ನು ಸತ್- ಸಂತಾನ ಕರುಣಿಸುವ ಪೂಜೆಯಿದು.
ಈ ರೀತಿ ಹಿಂದೆ ರುದ್ರ ದೇವನೇ ಪಾರ್ವತಿಗೆ ಹೇಳಿದ ವ್ರತದ ಪುಣ್ಯ ಪ್ರಭಾವ ಗಮನಾರ್ಹವಾದುದು.
ವ್ರತ ‘ ಎಂದರೆ ಒಳ್ಳೆಯ ಸದಾಚಾರ.
ಗೃಹಿಣೀ ಧರ್ಮಕ್ಕನುಸಾರವಾಗಿ ಶುಚಿರ್ಭೂತರಾಗಿ , ಶುದ್ಧ ಮನಸ್ಸಿನಿಂದ ಶ್ರದ್ಧೆಯಿಂದ ವ್ರತದಲ್ಲಿ ಸಹಭಾಗಿಗಳಾಗುವುದೇ ನಿಜವಾದ ಅರ್ಹತೆ . ಅಲಂಕೃತ ಮಂಟಪದಲ್ಲಿ ವಿಧ್ಯುಕ್ತ ಕಲಶದಲ್ಲಿ ಮಂಗಲ ಪ್ರದಾಯಿನೀ ಮಹಾ ಲಕ್ಷ್ಮೀಯನ್ನು ಶ್ರೀಮನ್ನಾರಾಯಣನ ಸಹಿತ ಕಲ್ಪೋಕ್ತ ವಿಧಿಯಿಂದ ಪೂಜಿಸಬೇಕು.
ಅಪೂಪ ( ಅಪ್ಪ ),
ಕ್ಷೀರ ಪಾಯಸ, ಪೂರ್ಣ ಭಕ್ಷ್ಯಾದಿ, ಫಲತಾಂಬೂಲ ಯೋಗ್ಯತಾನುಸಾರ ದೇವಿಗೆ ನೈವೇದ್ಯ ಕಾಲದಲ್ಲಿ ಅರ್ಪಿಸಬೇಕು . ಪ್ರಸನ್ನಾರ್ಥ್ಯದ ಬಳಿಕ ಪ್ರಸಾದ ರೂಪದ ದೋರ (ಪೂಜೆ ಮಾಡಿದ ದ್ವಾದಶಿ ಗ್ರಂಥಿ ಉಳ್ಳ ದಾರ) ಧರಿಸಿ ಬ್ರಾಹ್ಮಣರಿಗೆ ಸುವಾಸಿನಿಯರಿಗೆ ಮನೆಯ; ಕುಟುಂಬದ ಹಿರಿಯ ಮುತ್ತೈದೆಯರಿಗೆ ವ್ರತದ ಸಾಂಗತೆಗೆ ಭಕ್ಷ ಸಹಿತ ಫಲ ತಾಂಬೂಲ – ದಕ್ಷಿಣೆ ಒಪ್ಪಿಸಿ ಆಶೀರ್ವಾದ ಪಡೆಯುವುದು ಸಮುಚಿತವಾದುದು .
ಭಜನೆ , ಸ್ತೋತ್ರ ಪಠನ , ಸುವಾಸಿನಿ ಪೂಜೆ, ಕಥಾಶ್ರವಣ , ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳಿಂದ ವ್ರತ ಸಂಪನ್ನವಾಗುತ್ತದೆ . ವಿಶೇಷವಾಗಿ ಮಧ್ಯಾಹ್ನ ಕಾಲದಲ್ಲಿ ವ್ರತ ಆಚರಿಸುವ ವಿಧಾನವಿದ್ದರೂ , ಕೆಲವೆಡೆ ಸಂಜೆ ಪೂಜಿಸುವ ಪರಿಪಾಟವಿದೆ . ಆಚರಣೆಯ ವಿಧಿಯಲ್ಲಿ ಪ್ರಾದೇಶಿಕ ಭಿನ್ನತೆಯಿದ್ದರೂ , ಪೂಜಾ ವಿಧಾನದಲ್ಲಿ ಸಾಮ್ಯತೆ ಇದ್ದೇ ಇದೆ .
ಈ ಲಾಕ್ಡೌನ್ ಕಾಲದಲ್ಲಿ ಪೂಜೆಯಲ್ಲಿ ಸಾಮೂಹಿಕವಾಗಿ ಭಾಗಿಯಾಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪೂಜೆ ಮಾಡಲು ಬೇಕಾದ ವಿಧಾನವನ್ನು ಸ್ತೋತ್ರಗಳನ್ನು ಅಷ್ಟೋತ್ತರವನ್ನು ನಿಮಗೆ ವಾಟ್ಸಪ್ ಮೂಲಕ ಕಳಿಸಲಾಗುತ್ತದೆ.
ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜಾ ವಿಧಿ
ಈ ಪುಸ್ತಕ ಮತ್ತು ದ್ವಾದಶ ಗ್ರಂಥಿ ಉಳ್ಳ ದೋರ(ದಾರ)
ಬೇಕಾದವರು ಸಂಪರ್ಕಿಸಿ.
ಪೂಜೆ ಮಾಡಿದ ದಾರವನ್ನು ಉಚಿತವಾಗಿ ಕೊಡಲಾಗುತ್ತದೆ. (ಸಜ್ಜನರ ಸೇವೆ ಗೊಂದು ಅವಕಾಶ)
ಪೂಜೆಯ ವಿಶೇಷ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ
ಶ್ರೀ ಗಜೇಂದ್ರ ಜೋಶಿ
ಜಾತಕ ವಿಮರ್ಶಕರು 9538175275