ವಿಶ್ವಾದ್ಯಂತ ಅಷ್ಟೇ ಅಲ್ಲ ಭಾರತದಲ್ಲೂ ಕೋವಿಡ್ 3ನೇ ಅಲೆ ಶುರುವಾಗಿಯಾಗಿದೆ.. ಒಮಿಕ್ರಾನ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಆದ್ರೆ ಇಂತಹ ಸಂದರ್ಭದಲ್ಲೂ ಕೂಡ ನವೀಕೃತ ಕಾಶಿ ವಿಶ್ವನಾಥ ಧಾಮಕ್ಕೆ ಚಾಲನೆ ನೀಡಲಾಗಿತ್ತು.. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಿದ್ರು.. ಇದೀಗ ಈ ಧಾಮಕ್ಕೆ ಹೊಸ ವರ್ಷದ ಮೊದಲನೇ ದಿನವೇ 5 ಲಕ್ಷ ಮಂದಿ ಭೇಟಿ ನೀಡಿದ್ದ ಬಗ್ಗೆ ವರದಿಯಾಗಿದೆ.. ಇದು ಖುಷಿ ಪಡುವ ಸಂಗತಿಯಾದ್ರೂ ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಆತಂಕಕಾರಿ ಅಂತಲೇ ಹೇಳಬೇಕು..
ವಾರಾಣಸಿಯಲ್ಲಿನ ಶಿವನ ದೇವಸ್ಥಾನಕ್ಕೆ ಮಹಾಶಿವರಾತ್ರಿ ದಿನ ಭೇಟಿ ನೀಡುವುದು ಒಳ್ಳೆಯದು ಎಂದು ಭಕ್ತರು ಭಾವಿಸಿದ್ದಾರೆ. ಆದರೆ, ಇದುವರೆಗೂ ಆ ದಿನ ಭಕ್ತರ ಸಂಖ್ಯೆ 2.5 ಲಕ್ಷ ದಾಟಿಲ್ಲ ಎಂದೂ ಮೂಲಗಳು ತಿಳಿಸಿವೆ. ಜನವರಿ 1 ರಂದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 5 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿರುವುದು ಸ್ಥಳೀಯ ಆಡಳಿತಕ್ಕೆ ಅಚ್ಚರಿ ಮೂಡಿಸಿದೆ.
5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಕಾಶಿ ವಿಶ್ವನಾಥ ಧಾಮ ಸಂಕೀರ್ಣದ ಮೊದಲ ಹಂತವನ್ನು ಪ್ರಧಾನಿ ಮೋದಿ ಕಳೆದ ತಿಂಗಳು ಉದ್ಘಾಟಿಸಿದ್ದರು..