ಕೊರೊನಾ ಬಿಕ್ಕಕಟ್ಟಿನ ನಡುವೆಯೂ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ತಲಾತಲಾಂತರದಿಂದ ಬಂದಿರುವ ಪರಂಪರೆಯಂತೆ ಚಾಮುಂಡೆಶ್ವರಿಯ ವರ್ಧಂತಿ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಆಷಾಡ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ನೆರವೇರಿತು.
ಉತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಚಾಲನೆ ನಿಡಿದ್ರು. ಬಳಿಕ ಅಮ್ಮನವರ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇನ್ನೂ ಮುಂಜಾನೆಯಿಂದಲೇ ದೇವಿಗೆ ಮಾಹಾನ್ಯಾಸ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗಿದೆ. ಇನ್ನೂ ಜನರು ದೇವಾಲಯದ ಹೊರಂಗಣದಿಂದಲೇ ದೇವಿಯ ದರ್ಶನ ಪಡೆದುಕೊಂಡರು.








