ಅಮೇಜಾನ್ ನಂತಹ ಸಂಸ್ಥೆಗಳ ಬದಲು ಸಣ್ಣ ಮಾರಾಟಗಾರರನ್ನು ಪ್ರೋತ್ಸಾಹಿಸಿ : ವರುಣ್ ಗಾಂಧಿ
ಸ್ವಪಕ್ಷ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೇ ,ತ್ತೆ ವರುಣ್ ಗಾಂಧಿ ಕಿಡಿಕಾರಿದ್ದಾರೆ.. ಕೇಂದ್ರ ಸರ್ಕಾರದ ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಉದ್ಯಮ ಮತ್ತು ಮಾರಾಟಗಾರರ ವ್ಯಾಪಾರವನ್ನು ಬಲವಂತವಾಗಿ ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ಅಮೇಜಾನ್ ನಂತಹ ಸಂಸ್ಥೆಗಳ ಬದಲು ಸಣ್ಣ ಮಾರಾಟಗಾರರನ್ನು ಪ್ರೋತ್ಸಾಹಿಸಿ ಎಂದು ಬಿಜೆಪಿಯ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಹೌದು ಅಮೆಜಾನ್ ಮತ್ತು ವಾಲ್ ಮಾರ್ಟ್ಗಳ ಬದಲು ನೆರೆಕರೆಯ ಸಣ್ಣ ಮಾರಾಟಗಾರರಿಂದ ಖರೀದಿಸುವ ಮೂಲಕ ಅವರನ್ನು ಬೆಂಬಲಿಸುವಂತೆ ಜನರಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಮನವಿ ಮಾಡಿದ್ದಾರೆ.
ಜಾಗತಿಕ ಹಿಂಜರಿತದ ಸಂದರ್ಭದಲ್ಲಿ ರಾಷ್ಟ್ರದ ಆರ್ಥಿಕತೆಗೆ ಸಣ್ಣ ಉತ್ಪಾದಕರು ಮತ್ತು ಮಾರಾಟಗಾರರು ಕೊಡುಗೆ ನೀಡಿದ್ದರು. ಆದರೆ ಭ್ರಷ್ಟಾಚಾರ, ಬೆಲೆಯೇರಿಕೆ ಮತ್ತು ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮಾರಾಟಗಾರರನ್ನು ಬಲವಂತವಾಗಿ ವ್ಯಾಪಾರ ನಿಲ್ಲಿಸುವಂತೆ ಮಾಡಿದೆ. ಸಣ್ಣ ಮಾರಾಟಗಾರರಿಂದ ಕೊಳ್ಳುವ ಮೂಲಕ ಅವರನ್ನು ಬೆಂಬಲಿಸಬೇಕಿದೆ. ಅಮೆಜಾನ್ ಮತ್ತು ವಾಲ್ಮಾರ್ಟ್ ನಂತಹ ಮಾರಾಟಗಾರರ ಬದಲು ಸಣ್ಣ ವ್ಯಾಪಾರಿಗಳಿಂದ ಖರೀದಿಸಬೇಕು ಎಂದು ವರುಣ್ ಗಾಂಧಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ರೋಬೋಟ್ ಗೆ ಫೇಸ್ ಮತ್ತು ಧ್ವನಿ ನೀಡಿ 1.5 ಕೋಟಿ ಗೆಲ್ಲಿ