ಬೆಂಗಳೂರು : ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಬೆಳಗಿನ ಜಾವ ಬಿರುಸಾಗಿ ಮಳೆ ಸುರಿದಿದೆ. ಹೆಬ್ರಿ, ಪಡುಬಿದ್ರಿ, ಹಿರಿಯಡ್ಕ, ಬ್ರಹ್ಮಾವರದಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಪಡುಬಿದ್ರಿಯ ಕಲ್ಸಂಕ ಸೇತುವೆ ಕಾಮಗಾರಿ ಪ್ರದೇಶದಲ್ಲಿ ಮಳೆ ನೀರು ಜಮಾವಣೆಗೊಂಡು ಕೃತಕ ನೆರೆ ಸೃಷ್ಟಿ ಯಾಗಿದೆ. ಇತ್ತ ಕೊಡಗು ಜಿಲ್ಲೆಯ ಹಲವೆಡೆ ಇಂದು ಬೆಳಿಗ್ಗೆ ಮಳೆಯಾಗಿದೆ. ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಅಪ್ಪಂಗಳ ಸುತ್ತಮುತ್ತ ಮಳೆಯಾಗುತ್ತಿದೆ. ಜಿಲ್ಲೆಯ ಉಳಿದೆಡೆ ದಟ್ಟವಾದ ಮೋಡ ಕವಿದ ವಾತಾವರಣ ಇದೆ.
ಇಸ್ರೋ: ಅಂತರಿಕ್ಷದಲ್ಲಿ ಮೊಳಕೆಯೊಡೆದ ಅಲಸಂದೆ ಬೀಜಗಳು
ಅಂತರಿಕ್ಷದಲ್ಲಿ ಅಲಸಂದೆ ಬೀಜಗಳು ಯಶಸ್ವಿಯಾಗಿ ಮೊಳಕೆಯೊಡೆದಿವೆ ಎಂದು ಇಸ್ರೋ ಘೋಷಿಸಿದೆ. ಇತ್ತೀಚೆಗಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಈ ಮೊಳಕೆಯೊಡೆದ ಬೀಜಗಳಿಗೆ ಇನ್ನೂ ಐದು ದಿನಗಳಲ್ಲಿ ಎಲೆಗಳು...