ಬೆಂಗಳೂರು : ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಬೆಳಗಿನ ಜಾವ ಬಿರುಸಾಗಿ ಮಳೆ ಸುರಿದಿದೆ. ಹೆಬ್ರಿ, ಪಡುಬಿದ್ರಿ, ಹಿರಿಯಡ್ಕ, ಬ್ರಹ್ಮಾವರದಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಪಡುಬಿದ್ರಿಯ ಕಲ್ಸಂಕ ಸೇತುವೆ ಕಾಮಗಾರಿ ಪ್ರದೇಶದಲ್ಲಿ ಮಳೆ ನೀರು ಜಮಾವಣೆಗೊಂಡು ಕೃತಕ ನೆರೆ ಸೃಷ್ಟಿ ಯಾಗಿದೆ. ಇತ್ತ ಕೊಡಗು ಜಿಲ್ಲೆಯ ಹಲವೆಡೆ ಇಂದು ಬೆಳಿಗ್ಗೆ ಮಳೆಯಾಗಿದೆ. ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಅಪ್ಪಂಗಳ ಸುತ್ತಮುತ್ತ ಮಳೆಯಾಗುತ್ತಿದೆ. ಜಿಲ್ಲೆಯ ಉಳಿದೆಡೆ ದಟ್ಟವಾದ ಮೋಡ ಕವಿದ ವಾತಾವರಣ ಇದೆ.
ಡಿ. ಗುಕೇಶ್ ಗೆ ವಿಶ್ವ ‘ಚೆಸ್ ಚಾಂಪಿಯನ್’ ಪಟ್ಟ
Gukesh Wins World Chess Championship ಭಾರತದ 18 ವರ್ಷದ ಡಿ. ಗುಕೇಶ್ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ...