ಬ್ಲಾಕ್ ಮೇಲ್ ಸಿಎಂ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ವ್ಯಾಪಾರ : ವಾಟಾಳ್ ನಾಗರಾಜ್
ಬೆಂಗಳೂರು : ಬ್ಲಾಕ್ ಮೇಲ್ ಮುಖ್ಯಮಂತ್ರಿ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ನೂತನ ಮಂತ್ರಿ ಮಂಡಲದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಯಡಿಯೂರಪ್ಪನವರ ಮಂತ್ರಿಮಂಡಲ ಸರಿಯಿಲ್ಲ, ಅವರಿಗೆ ಹೇಳೋರು ಕೇಳೋರು ಯಾರು ಇಲ್ಲ.
ಬೇಕಾಬಿಟ್ಟಿಯಾಗಿ ಮಂತ್ರಿಮಂಡಲ ರಚನೆ ಮಾಡಿದ್ದಾರೆ. ಎಂಟಿಬಿ ನಾಗರಾಕ್ ಹಣವಂತ, ನಿರಾಣಿ ಹಣವಂತ ಹಾಗಾಗಿ ಅವರನ್ನ ಮಂತ್ರಿ ಮಾಡಿದಾರೆ ಎಂದು ಹರಿಹಾಯ್ದರು.
ಇದೇ ವೇಳೆ ಯೋಗೇಶ್ವರ್ ಗೆ ಮಂತ್ರಿಸ್ಥಾನ ಯಾಕೆ ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ಸೋತವರಿಗೆ ಎಂಎಲ್ ಸಿ ಮಾಡಿದ್ರು, ವಿಧಾನಸೌಧದಲ್ಲಿ ಮಾಡಬಾರದ ಅನಾಚಾರ ಮಾಡಿದ್ದಾರೆ.
ಬಾಂಬೆಯಲ್ಲಿ ಶಾಸಕರನ್ನು ಇಟ್ಟುಕೊಂಡಿ ಸರ್ಕಾರ ಕೆಡವಿದರು. ಈ ಸರ್ಕಾರದಲ್ಲಿ ಅಂಥವರು ಸಚಿವರಾಗ್ತಿದ್ದಾರೆ ಎಂದು ಬುಸುಗುಟ್ಟಿದರು.
ಇನ್ನು ಯಡಿಯೂರಪ್ಪನವರ ಮಂತ್ರಿಮಂಡಲಕ್ಕೆ ಬೆಲೆಯಿಲ್ಲ. ಯಡಿಯೂರಪ್ಪ ಬ್ಲಾಕ್ ಮೇಲ್ ಸಿಎಂ. ಇವತ್ತು ಮಂತ್ರಿಮಂಡಲದಲ್ಲಿ ವ್ಯಾಪಾರ ನಡೆಯುತ್ತಿದೆ.
ಯತ್ನಾಳ್ ಹಾಗೂ ರೇಣುಕಾಚಾರ್ಯ ಮಂತ್ರಿಯಾಗಬೇಕಿತ್ತು ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









