ಮಠಾಧೀಶರನ್ನ ದೇವರೇ ಕಾಪಾಡಬೇಕು : ವಾಟಾಳ್ ನಾಗರಾಜ್ Vatal Nagaraj
ಮೈಸೂರು : ಮಠಾಧೀಶರನ್ನ ದೇವರೇ ಕಾಪಾಡಬೇಕು. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ ಎಂದು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ದೂರಿದ್ದಾರೆ.
ಬಿಎಸ್ ವೈ ಪರ ಮಠಾಧೀಶರು ಬ್ಯಾಟಿಂಗ್ ಮಾಡುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ಮಠಾಧೀಶರನ್ನ ದೇವರೇ ಕಾಪಾಡಬೇಕು.
ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ. ಮಠಾಧಿಪತಿಗಳು ಯಾವತ್ತೂ ಬೀದಿಗೆ ಬಂದಿಲ್ಲ.
ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ವೀರಶೈವ ತತ್ವ ಸಿದ್ದಾಂತ ಇಡೀ ಸಮಾಜಕ್ಕೆ ದಾರಿದೀಪ. ಮಠಗಳನ್ನು ಯಡಿಯೂರಪ್ಪ ಕತ್ತಲೆಯಲ್ಲಿ ಇಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಂದುವರೆದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 6 ತಿಂಗಳೆ ಆಗಿದೆ. ಈಗಂತೂ ತುತ್ತ ತುದಿಗೆ ಬಂದಿದೆ.
ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಆಡಳಿತ ಕುಸಿದಿರುವುದರಿಂದ ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.








