Vatal Nagaraj | ಸಾವರ್ಕರ್ ಫೋಟೋ ಮೆರವಣಿಗೆ ನಾವು ಖಂಡಿಸುತ್ತೇವೆ
ಬೆಂಗಳೂರು : ಈ ರಾಜ್ಯ ಕನ್ನಡಿಗರದ್ದು, ಕನ್ನಡಕ್ಕೆ ಅಪಮಾನ ಆದ್ರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಗಣೇಶೋತ್ಸವದಂದು ಸಾವರ್ಕರ್ ಉತ್ಸವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ.
ಶಾಂತಿ ಕದಡುವ ಕೆಲಸ ಆಗುತ್ತಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಗಾಂಧಿ ಒಬ್ಬರೇ ಈ ದೇಶಕ್ಕೆ ಮಹಾತ್ಮ ಎಂದು ಹೇಳಿದರು.

ಕನ್ನಡ ಪರ ಸಂಘಟನೆಗಳು ಈ ವಾರದಲ್ಲಿ ಸಭೆ ಮಾಡುತ್ತೇವೆ. ಈ ರಾಜ್ಯ ಕನ್ನಡಿಗರದ್ದು, ಕನ್ನಡಕ್ಕೆ ಅಪಮಾನ ಆದ್ರೆ ನಾವು ಸುಮ್ಮನೆ ಕೂರುವುದಿಲ್ಲ.
ಮಹಾತ್ಮ ಗಾಂಧಿ ಬಿಟ್ಟು ಬೇರೆ ಯಾರನ್ನು ನಾವು ಒಪ್ಪುವುದಿಲ್ಲ. ಸಾವರ್ಕರ್ ಫೋಟೋ ಮೆರವಣಿಗೆಯನ್ನ ನಾವು ಖಂಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.








