Vava Suresh: ಉರಗ ತಜ್ಞ ವಾವಾ ಸುರೇಶ್ ಗೆ ಕಚ್ಚಿದ ನಾಗರ ಹಾವು…
ಕೇರಳ : ಕೇರಳದ ಜನಪ್ರಿಯ ಉರುಗ ತಜ್ಞರಾಗಿರಿರುವ ವಾವಾ ಸುರೇಶ್ ಗೆ ನಾಗರಹಾವು ಕಚ್ಚಿದ್ದು , ಅವರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.. ಸ್ನೇ ಸುರೇಶ್ ಅವರಿಗೆ ಕೊಟ್ಟಾಯಂನಲ್ಲಿ ನಾಗರ ಹಾವು ಕಚ್ಚಿದೆ.. ಅವರಿಗೆ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.. ಸದ್ಯಕ್ಕೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ. ಮೊದಲಿಗೆ ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.. ಅಲ್ಲಿ ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಿ, ಆಂಟಿ ವೆನಮ್ ನೀಡಲಾಯಿತು. ಬಳಿಕ ವಿಶೇಷ ಚಿಕಿತ್ಸೆಗಾಗಿ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.. ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ..
vava suresh biten by poisionous snake
ಕೊಟ್ಟಾಯಂ ಬಳಿಯ ಕುರಿಚಿ ಗ್ರಾಮ ಪಂಚಾಯತ್‍ನ ನಿವಾಸಿಗಳು ದನದ ಕೊಟ್ಟಿಗೆಯ ಬಳಿ ಹಾಕಿದ್ದ ಕಲ್ಲಿನ ರಾಶಿಗಳ ನಡುವೆ ನಾಗರಹಾವನ್ನು ಕಂಡು ನಂತರ ಹಾವು ಹಿಡಿಯಲು ಸುರೇಶ್ ಅವರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ಸುರೇಶ್ ಹಾವು ಹಿಡಿಯಲು ನೋಡುವುದಕ್ಕೆ ಹಲವಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅವರು ಹಾವಿನ ಬಾಲವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಪ್ರಯತ್ನಿಸುತ್ತಿದ್ದ ವೇಳೆ ಅವರ ಬಲ ತೊಡೆಯ ಭಾಗಕ್ಕೆ ಹಾವು ಕಚ್ಚಿದೆ. ಸುಮಾರು 20 ವರ್ಷಗಳಿಂದಲೂ ಸುರೇಶ್ ಅವರು ಹಾವು ಹಿಡಿಯುತ್ತಿದ್ದು, ಇದುವರೆಗೂ 50,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ. ಇದರಲ್ಲಿ 200ಕ್ಕೂ ಹೆಚ್ಚು ಕಿಂಗ್ ಕೋಬ್ರಾಗಳನ್ನು ಹಿಡಿದಿದ್ದಾರೆ. ಜೊತೆಗೆ ಸುಮಾರು 300ಕ್ಕೂ ಹೆಚ್ಚು ಬಾರಿ ಹಾವುಗಳ ಕಡಿತಕ್ಕೆ ಒಳಗಾಗಿದ್ದಾರೆ..
Mahathma Gandhiji : ” ವೈ ಐ ಕಿಲ್ಡ್ ಗಾಂಧಿ” ಚಿತ್ರದ ಬಿಡುಗಡೆಗೆ ತಡೆಯಿಲ್ಲ…..!!!!









