ರಾಯಚೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ಭೀತಿಯಿಂದಾಗಿ ರಾಜ್ಯದಲ್ಲಿ ಜಾತ್ರೆಗಳಿಗೆ ನಿರ್ಭಂದ ಹೇರಲಾಗಿದೆ. ಆದ್ರೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿಯಾಗಿ ವೀರಭದ್ರೇಶ್ವರನ ಜಾತ್ರೆ ಮಾಡಲಾಗಿದೆ. ಈ ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಜಾತ್ರೆಯಲ್ಲಿ ಪುರವಂತಿಕೆ ಸೇವೆ, ಕಳಸಾರೋಹಣ, ಬಾಯಿಗೆ ಶಸ್ತ್ರ ಹಾಕಿಸಿಕೊಂಡು ವೀರಭದ್ರೇಶ್ವರ ಭಕ್ತರು ಭಕ್ತಿ ಮೆರೆದಿದ್ದಾರೆ. ಸಾವಿರಾರು ತೆಂಗಿನಕಾಯಿ ಒಡೆದು ಭಕ್ತರು ಹರಕೆ ತೀರಿಸಿದ್ದಾರೆ. ಜಾತ್ರೆ ಆಚರಣೆಯಲ್ಲಿ ಜನ ಸೇರುವುದನ್ನ ತಡೆಯುವಲ್ಲಿ ಲಿಂಗಸೂಗುರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.








