ಒಂದು ಕಾಲದಲ್ಲಿ ತನ್ನ ಕುಖ್ಯಾತ ಕೃತ್ಯಗಳಿಂದ ಇಡೀ ದಕ್ಷಣ ಭಾರತವನ್ನ ಬೆಚ್ಚಿಬೀಳಿಸಿದ್ದ ಕಾಡುಗಳ್ಳ ವೀರಪ್ಪನ್ ಈಗ ನೆನಪು ಮಾತ್ರ. ಆದರೆ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಂಡು ಸುದ್ದಿಯಾಗಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಉಸ್ತುವರಿ ಮುರುಳೀಧರನ್ ಅವರ ಸಮ್ಮುಖದಲ್ಲಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾಜಿ ಕೇಂದ್ರ ಸಚಿವ ಪೆÇನ್ ರಾಧಾಕೃಷ್ಣನ್ ಉಪಸ್ಥಿತರಿದ್ದರು ಎನ್ನಲಾಗಿದೆ.
ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾರಾಣಿ, ನನ್ನ ತಂದೆ ವೀರಪ್ಪನ್ ಕೂಡಾ ಸಮಾಜ ಸೇವೆ ಮಾಡಲು ಬಯಸಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿತ್ತು. ಅವರಿಗೆ ತಪ್ಪಿನ ಅರಿವಾಗುವ ವೇಳೆ ಸಮಯ ಮೀರಿತ್ತು. ನಾನು ಈಗ ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ. ಇದೀಗಾ ದಂತಚೋರನ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಂಡಿರುವುದು ತೀವ್ರಚರ್ಚೆಗೆ ಒಳಗಾಗಿದೆ.








