ಚೆನ್ನೈ : ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರಿಗೆ ತಮಿಳು ನಾಡು ಬಿಜೆಪಿಯಲ್ಲಿ ಉನ್ನತ ಸ್ಥಾನ ಸಿಕ್ಕಿದ್ದು, ಅವರನ್ನು ತಮಿಳುನಾಡು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರನ್ನಾಗಿ ನೇಮಕಮಾಡಲಾಗಿದೆ. ವಿದ್ಯಾರಾಣಿ ಅವರು ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಅವರ ತಂದೆ ಕಸ್ತೂರಿ ರಾಜ ಅವರಿಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಹುದ್ದೆ ನೀಡಲಾಗಿದೆ. ಅದೇ ರೀತಿ ನಿರ್ದೇಶಕ ಪೆರಾರಸು, ಸಂಗೀತ ನಿರ್ದೇಶಕ ಧೀನಾ, ನಟ ಆರ್.ಕೆ. ಸುರೇಶ್ ಅವರನ್ನು ಬಿಜೆಪಿ ವಿವಿಧ ಸಮಿತಿಗೆ ನೇಮಿಸಲಾಗಿದೆ.








