ರೋಚಕವಾದ ಸಾಹಸಮಯ ಜನಪದ ಕಥೆಯನ್ನು ಹೊಂದಿರುವ ತುಳುನಾಡಿನ ವೀರಪುರುಷ ಅಗೋಳಿ ಮಂಜಣ್ಣ ಸಿನಿಮಾ ಟೀಸರ್ ಬಿಡುಗಡೆ Veerapurusha agoli manjanna

ಕಾರ್ಕಳ, ನವೆಂಬರ್28: ತುಳುನಾಡು ಪ್ರಕೃತಿ ದೇವಿಯ ಕೃಪೆಗೆ ಪಾತ್ರವಾದ ನಾಡು. ಇಲ್ಲಿನ ಆಚಾರ ವಿಚಾರಗಳು ಹೇಗೆ ವಿಶಿಷ್ಟವೋ ಹಾಗೆ ಇಲ್ಲಿನ ವೀರ ಪುರುಷರ ಕಥೆಗಳು ಕೂಡ ರೋಚಕವಾದದ್ದು. ತುಳುನಾಡಿನ ಪ್ರಮುಖ ಅಸಾಮಾನ್ಯ ಪುರುಷರಲ್ಲಿ ಅಗೋಳಿ ಮಂಜಣ್ಣ ಕೂಡ ಪ್ರಸಿದ್ಧ ವೀರಪುರುಷ. Veerapurusha agoli manjanna
ಇದೀಗ ಅಗೋಳಿ ಮಂಜಣ್ಣನ ಕುರಿತು ತುಳು, ಕನ್ನಡ, ಮರಾಠಿ ಭಾಷೆಯಲ್ಲಿ ಸಿನಿಮಾವೊಂದು ನಿರ್ಮಾಣವಾಗಿದ್ದು, ನವೆಂಬರ್ 26ರಂದು ಅದರ ಟೀಸರ್ ಕಾರ್ಕಳದ ಕಟೀಲ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಬಿಡುಗಡೆಯಾಗಿದೆ.
ಬರ್ತ್ ಡೇ ಸಂಭ್ರಮದಲ್ಲಿ ‘ಆರ್ಮುಗಂ’ : ಸೀರಿಯಲ್ ಸೆಟ್ ಚಂದ್ರಪ್ಪನ ಎಂಟ್ರಿ ಹೇಗಿದೆ ಗೊತ್ತಾ..!
ತುಳು ನಾಡಿನ ವೀರಪುರುಷ ಅಗೋಳಿ ಮಂಜಣ್ಣನ ಪರಾಕ್ರಮವನ್ನು ನಿರ್ದೇಶಕ ಸುಧೀರ್ ಅತ್ತಾವರ್ ತೆರೆಯ ಮೇಲೆ ತರಲು ಸಜ್ಜಾಗಿದ್ದು, ಕೋಟಿ ಚೆನ್ನಯ್ಯ ಧಾರಾವಾಹಿ ಖ್ಯಾತಿಯ ರೋಹಿತ್ ಕುಮಾರ್ ಕಟೀಲ್ ‘ಅಗೋಳಿ ಮಂಜಣ್ಣ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೂಪರ್ ಮ್ಯಾನ್ ಅಫ್ ತುಳುನಾಡು ಎಂಬ ಅಡಿಬರಹದ ಈ ಸಿನಿಮಾ ರೋಚಕವಾದ ಸಾಹಸಮಯ ಜನಪದ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.
ಗೋಳದಡಿಗುತ್ತು ಗಡಿಗಾರ ವರ್ಧಮಾನ್ ದುರ್ಗಾ ಪ್ರಸಾದ್ ಶೆಟ್ಟಿಯವರು ವೀರಪುರುಷ ಅಗೋಳಿ ಮಂಜಣ್ಣ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.

ಮಾಜಿ ಸಚಿವ ಅಭಯ ಚಂದ್ರ ಜೈನ್, ಶಾಸಕ ವಿ. ಸುನೀಲ್ ಕುಮಾರ್ ಶಾಸಕ ಲಾಲಾಜಿ ಮೆಂಡನ್, ಆಳ್ವಾಸ್ ಸಂಸ್ಥೆಯ ಡಾ. ಮೋಹನ ಆಳ್ವ, ಗಣೇಶ್ ಕಾರ್ಣಿಕ್, ಉದ್ಯಮಿ ಸದಾನಂದ ಶೆಟ್ಟಿ, ಅಜಿತ್ ರೈ ಮಾಲಾಡಿ, ನಾಯಕ ನಟ ರೋಹಿತ್ ಕುಮಾರ್ ಕಟೀಲು ಮತ್ತಿತರು ಉಪಸ್ಥಿತರಿದ್ದರು.
Veerapurusha agoli manjanna
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲಕ್ಕೆ ಕರಿಮೆಣಸಿನ 5 ಸೂಪರ್ ಪವರ್‌ಫುಲ್ ಆರೋಗ್ಯ ಪ್ರಯೋಜನಗಳುhttps://t.co/FLJEctVJQv
— Saaksha TV (@SaakshaTv) November 26, 2020
ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ #yoga#Kannada#yogateacherhttps://t.co/pRB58lu6J7
— Saaksha TV (@SaakshaTv) November 25, 2020








