ದೇಶದಲ್ಲಿ ಗಗನಕ್ಕೆ ಏರಿಕೆ ಕಂಡಿರುವ ತರಕಾರಿ ಬೆಲೆ ಸೆಪ್ಟೆಂಬರ್ ನಿಂದ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ತರಕಾರಿ ಹಾಗೂ ಸಿರಿಧಾನ್ಯಗಳ ಬೆಲೆ ಜುಲೈನಲ್ಲಿ ಚಿಲ್ಲರೆ ಹಣ ದುಬ್ಬರವನ್ನು ಶೇ. 7.44ಕ್ಕೆ ಹೆಚ್ಚಿಸಿವೆ. ಇದು 15 ತಿಂಗಳಲ್ಲಿಯೇ ದಾಖಲಾದ ಅತ್ಯಧಿಕವಾಗಿದೆ. ಅಲ್ಲದೇ, ಸೆಪ್ಟೆಂಬರ್ ನಲ್ಲಿ ತರಕಾರಿ ಹಣದುಬ್ಬರದಲ್ಲಿ ಗಮನಾರ್ಹವಾದ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಆಹಾರದ ಬೆಲೆಗಳಿಗೆ ಅಡ್ಡಿಯಾಗಬಹುದಾದರೂ ಧಾನ್ಯಗಳಿಗೆ ಉತ್ತಮ ಬೆಲೆ ಬರುವ ಲಕ್ಷಣವಿದೆ ಎಂದು ಹೇಳಿದ್ದಾರೆ.
ಬೆಲೆ ಸ್ಥಿರತೆಯು ಸುಸ್ಥಿರ ಬೆಳವಣಿಗೆಗೆ ಆಧಾರವಾಗಿರಬೇಕು. ಬೆಳವಣಿಗೆಯನ್ನು ಮುಂದುವರೆಸಲು ಹಾಗೂ ಬಂಡವಾಳ ವೆಚ್ಚ ವೇಗ ಪಡೆಯಲು ಪರಿಸ್ಥಿತಿಗಳು ಅನುಕೂಲವಾಗಿವೆ ಎಂದು ಹೇಳಿದ್ದಾರೆ.