ಭೀಕರ ಪ್ರವಾಕ್ಕೆ ತತ್ತರಿಸಿದ ಪಾಕ್ – 1KG ಟೊಮೆಟೊ 500 ರುಪಾಯಿ….
ಪಾಕಿಸ್ತಾನದಲ್ಲಿ ಭೀಕರ ಮಾನ್ಸೂನ್ ಪ್ರವಾಹದಿಂದಾಗಿ ಭಾರಿ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. 1 KG ಟೊಮೆಟೊ 500 ರುಪಾಯಿಗೆ ಮಾರಾಟವಾಗುತ್ತಿದೆ.
ಆಹಾರ ಪೂರೈಕೆ ಸರಪಳಿ ಪ್ರವಾಹದಿಂದ ಅಸ್ತವ್ಯಸ್ತಗೊಂಡ ಕಾರಣ ತರಕಾರಿ ಮಾರಾಟಗಾರರು ಅ ಅನಿಯಂತ್ರಿತ ಬೆಲೆಗಳನ್ನು ನಿಗದಿಪಡಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಸಾಮಾ ಟಿವಿ ವರದಿ ಮಾಡಿದೆ.
ಈರುಳ್ಳಿ ಕೆಜಿಗೆ 300 ರೂ., ನಿಂಬೆಹಣ್ಣು ಕೆಜಿಗೆ 400 ರೂ.ಗೆ ಮಾರಾಟವಾಗುತ್ತಿದೆ. ಟೊಮ್ಯಾಟೊ ಬೆಲೆ ಪ್ರತಿ ಕೆಜಿಗೆ 80 ರೂ ಇದ್ದದ್ದು, ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ, ಈರುಳ್ಳಿ ಕೆಜಿಗೆ 61 ರೂ.ಗಿಂತ ಐದು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ ಎಂದು ಸಾಮಾ ಟಿವಿ ವರದಿ ಮಾಡಿದೆ.
ಕೆಜಿಗೆ 100 ರೂ.ಗಿಂತ ಹೆಚ್ಚು ಮಾರಾಟವಾಗದ ಈರುಳ್ಳಿ ಈಗ 250 ಅಥವಾ 300 ರೂ.ಗೆ ಮಾರಾಟವಾಗುತ್ತಿದೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಈರುಳ್ಳಿ, ಟೊಮೆಟೊ ಮತ್ತು ಖಾರಿಫ್ ಮೆಣಸಿನಕಾಯಿಗಳು ಭಾಗಶಃ ಹಾನಿಗೊಳಗಾಗಿವೆ. ಹತ್ತಿ ಬೆಳೆಗಳ ನಷ್ಟ ಮಾತ್ರ $2.6 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ಜವಳಿ ಮತ್ತು ಸಕ್ಕರೆ ರಫ್ತು $1 ಶತಕೋಟಿಗಳಷ್ಟು ಕುಸಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.








