ಸದನದಲ್ಲಿ ಗದ್ದಲ : ವಿಪಕ್ಷಗಳ ಕೃತ್ಯ ಖಂಡಿಸುತ್ತಾ ಭಾವುಕರಾದ ಸಭಾಪತಿ ವೆಂಕಯ್ಯ ನಾಯ್ಡು
ನವದೆಹಲಿ : ರಾಜ್ಯಸಭೆಯಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳ ಚರ್ಚೆಯ ವೇಳೆ, ವಿಪಕ್ಷಗಳ ನಾಯಕರು ಗದ್ದಲ ಸೃಷ್ಟಿಮಾಡಿದ್ದನ್ನ ಖಂಡಿಸುವ ವೇಳೆ ರಾಜ್ಯಸಭಾ ಸಭಾಪತಿಗಳಾದ ವೆಂಕಯ್ಯ ನಾಯ್ಡು ಅವರು ಭಾವುಕರಾಗಿದ್ದು ಕಂಡುಬಂದಿದೆ.. ಹೌದು.. ವಿಪಕ್ಷಗಳು ಪ್ರಜಾಪ್ರಭುತ್ವದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆಂದು ಹೇಳಿ ಅದನ್ನು ಖಂಡಿಸುವ ಹೇಳಿಕೆಯನ್ನು ಓದುವ ಸಂದರ್ಭ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಭಾವುಕರಾದರು.
ತೆಲಂಗಾಣ : ಕಾರ್ ನಲ್ಲಿ ಲಾಕ್ ಮಾಡಿ ಬಿಜೆಪಿ ನಾಯಕನ ಸಜೀವ ದಹನ
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳ ಚರ್ಚೆಯ ವೇಳೆ ವಿಪಕ್ಷ ಸದಸ್ಯರು ಮಂಗಳವಾರ ಸದನದ ಮಧ್ಯಭಾಗದಲ್ಲಿದ್ದ ಅಧಿಕಾರಿಗಳ ಮೇಜನ್ನೇರಿ, ಕರಿಪತಾಕೆಗಳನ್ನು ಪ್ರದರ್ಶಿಸಿ, ಫೈಲ್ಗಳನ್ನು ಕಿತ್ತೆಸೆದು, ಮೇಜುಗಳ ಮೇಲೆ ಗಂಟೆಗಳ ಕಾಲ ಕುಳಿತುಕೊಂಡು ಹಾಗೂ ನಿಂತುಕೊಂಡು ಇದ್ದ ಘಟನೆಯ ಹಿನ್ನೆಲೆಯಲ್ಲಿ ಇಂದು ಅದನ್ನು ಸಭಾಪತಿ ಖಂಡಿಸುವ ಹೇಳಿಕೆ ಓದಿದ್ದರು.
ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಹಾಗೂ ಅದರ ಕೇಂದ್ರ ಸ್ಥಾನವನ್ನು ಗರ್ಭಗುಡಿ ಎಂದು ವಿವರಿಸಿದ ಅವರು ನಿನ್ನೆ ಸಂಸತ್ತಿನ ಪಾವಿತ್ರ್ಯಕ್ಕೆ ಧಕ್ಕೆ ತಂದ ರೀತಿ ನೋಡಿ ನನಗೆ ಬಹಳ ನೋವಾಗಿದೆ, ನನ್ನ ಆಕ್ರೋಶ ಹೊರಹಾಕಲು ಹಾಗೂ ಖಂಡಿಸಲು ಪದಗಳು ದೊರಕುತ್ತಿಲ್ಲ, ಕಳೆದ ರಾತ್ರಿ ನಾನು ನಿದ್ದೆಯಿಲ್ಲದೆ ಕಳೆದಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.