ಚಂದನವನದ ಹಿರಿಯ ನಟಿ ಬಿ. ಜಯಾ ನಿಧನ
ಬೆಂಗಳೂರು : ಚಂದನವನದ ಹಿರಿಯ ನಟಿ ಬಿ. ಜಯಾ ಅವರು ವಿಧಿವಶವರಾಗಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಬಿ. ಜಯಾ ಅವರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ಮುಖ್ಯವಾಗಿ ಅವರು ಹಾಸ್ಯ ಪಾತ್ರಗಳ ಮೂಲಕ ಗಮನಸೆಳೆದಿದ್ದರು.
ಬಿ. ಜಯಾ ಅವರು ಸಿನಿಮಾ ಜೊತೆಗೆ ಹಲವಾರು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
ವರ ನಟ ಡಾ. ರಾಜಕುಮಾರ್ ಅವರ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ.
ಅನೇಕ ದಿಗ್ಗಜರ ಚಿತ್ರಗಳಲ್ಲಿ ಅಭಿನಯಿಸಿದ ಜಯಾ ಅವರು ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇನ್ನು ಹಿರಿಯ ನಟಿಯ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.