ಕೋಲಾರ : ಪಶುವೈದ್ಯನ ನಿರ್ಲಕ್ಷ್ಯದಿಂದ 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಣಕಲ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ರೈತ ಸಂಜೀವಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. kolar saaksha tv
ನಿನ್ನೆ ಸಂಜೆ ಪಶುವೈದ್ಯ ಪ್ರದೀಪ್ ಕುಮಾರ್ ಕುರಿಗಳಿಗೆ ಇಂಜೆಕ್ಷನ್ ಮಾಡಿದ್ದರು. ಇಂದು ಬೆಳಿಗ್ಗೆ ಯಿಂದ 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಕುರಿಗಳು ಮೃತಪಟ್ಟಿವೆ..
ಪಶುವೈದ್ಯ ನೀಡಿದ ಇಂಜೆಕ್ಷನ್ ನಿಂದ ಕುರಿಗಳು ಸಾವನ್ನಪ್ಪಿವೆ ಎಂದು ರೈತ ಆರೋಪಿಸಿದ್ದಾರೆ. ಅಲ್ಲದೆ ನಿರ್ಲಕ್ಷ್ಯ ತೋರಿದ ಪಶುವೈದ್ಯನ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಜೀವಪ್ಪ ಆಗ್ರಹಿಸಿದ್ದಾರೆ.









