ನವದೆಹಲಿ:
ಭಾರತದ ಉಪ ರಾಷ್ಟ್ರಪತಿ ಚುನಾವಣೆ 2025 ಇಂದು (ಸೆಪ್ಟೆಂಬರ್ 9) ಸಂಸತ್ತಿನಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಅಂತ್ಯಗೊಂಡಿದ್ದು, ಒಟ್ಟು 96% ಮತದಾನ ದಾಖಲಾಗಿದೆ.
ಈ ಬಾರಿ ಚುನಾವಣೆಯಲ್ಲಿ ಎನ್‌ಡಿಎ (NDA) ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಹಾಗೂ INDIA ಮೈತ್ರಿಕೂಟದ ಅಭ್ಯರ್ಥಿ, ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಿ. ಸುಧರ್ಷನ್ ರೆಡ್ಡಿ ನಡುವೆ ನೇರ ಸ್ಪರ್ಧೆ ನಡೆಯಿತು. ಸಂಸತ್ತಿನ ಎರಡೂ ಸದನಗಳ ಒಟ್ಟು 781 ಸದಸ್ಯರಲ್ಲಿ 750ಕ್ಕೂ ಹೆಚ್ಚು ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ.
ಭಾರತ ರಾಷ್ಟ್ರ ಸಮಿತಿ (BRS), ಶಿರೋಮಣಿ ಅಕಾಲಿ ದಳ ಮತ್ತು ಕೆಲವು ಪಕ್ಷಗಳು ಮತದಾನದಲ್ಲಿ ಭಾಗವಹಿಸದೇ ಬಾಯ್‌ಕಾಟ್ ಮಾಡಿವೆ.
ಮತ ಎಣಿಕೆ ಇಂದು ಸಂಜೆ 6 ಗಂಟೆಯ ನಂತರ ಆರಂಭವಾಗಲಿದ್ದು, ಫಲಿತಾಂಶವನ್ನು ರಾತ್ರಿ ವೇಳೆಗೆ ಪ್ರಕಟಿಸುವ ನಿರೀಕ್ಷೆ ಇದೆ. ಸಂಸತ್ತಿನಲ್ಲಿ NDAಗೆ ಸ್ಪಷ್ಟ ಬಹುಮತವಿರುವುದರಿಂದ, ಸಿ.ಪಿ. ರಾಧಾಕೃಷ್ಣನ್ ಗೆಲುವಿನ ಸಾಧ್ಯತೆ ಹೆಚ್ಚು ಎನ್ನಲಾಗಿದೆ.








