ಸೈಬರ್ ಅಫರಾಧಗಳನ್ನ ನಿಭಾಯಿಸಲು ಪೊಲೀಸರ ಕೌಶಲ್ಯಗಳನ್ನ ನಿಭಾಯಿಸುವ ಅಗತ್ಯವಿದೆ – ವೆಂಕಯ್ಯನಾಯ್ಡು..
ಸೈಬರ್ ಅಪರಾಧಗಳು, ಆರ್ಥಿಕ ಅಪರಾಧಗಳು ಮತ್ತು ಆನ್‌ಲೈನ್ ವಂಚನೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪೊಲೀಸರ ಕೌಶಲ್ಯವನ್ನು ಸುಧಾರಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಒತ್ತಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಅವರು ಬರೆದಿರುವ – ದಿ ಸ್ಟ್ರಗಲ್ ಫಾರ್ ಪೊಲೀಸ್ ರಿಫಾರ್ಮ್ಸ್ ಇನ್ ಇಂಡಿಯಾ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಪೊಲೀಸರು ಸಾಮಾನ್ಯ ಜನರೊಂದಿಗೆ ಸೌಹಾರ್ದ ಮತ್ತು ಸೌಜನ್ಯದಿಂದ ವರ್ತಿಸುವಂತೆ ಒತ್ತಾಯಿಸಿದರು.
ಉಪರಾಷ್ಟ್ರಪತಿಗಳು ಮಾತನಾಡಿ, ಪೊಲೀಸ್ ಸುಧಾರಣೆಗಳನ್ನು ತರಲು ಕೇಂದ್ರ ಮತ್ತು ರಾಜ್ಯಗಳು ಟೀಂ ಇಂಡಿಯಾ ಸ್ಪೂರ್ತಿಯೊಂದಿಗೆ ಕೆಲಸ ಮಾಡಬೇಕು. ಉತ್ತಮ ಪೋಲೀಸಿಂಗ್‌ಗೆ ಸರ್ಕಾರ ಕೈಗೊಂಡ ಹಲವಾರು ಉಪಕ್ರಮಗಳ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
Vice President Venkaiah Naidu calls for renewed thrust to implementing reforms in police forces