ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೋವಿಡ್ ಪಾಸಿಟಿವ್…
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೈದರಾಬಾದ್‌ನಲ್ಲಿ ಕೋವಿಡ್ -19 ಪಾಸಿಟಿವ್ ತಗುಲಿದೆ. ಅವರು ಒಂದು ವಾರ ಪ್ರತ್ಯೇಕವಾಗಿ ಐಸೋಲೇಟ್ ಆಗಿರುತ್ತಾರೆ ಎಂದು ಅವರ ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ.
“ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಐಸೋಲೇಟ್ ಆಗುವಂತೆ ಮತ್ತು ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ”
ಮೊನ್ನೆ ಭಾನುವಾರ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಹೈದರಾಬಾದ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅದರ ಫೋಟೋಗಳನ್ನು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. “ಮಹಾನ್ ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ದೂರದೃಷ್ಟಿಯ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು” ಎಂದು ಅವರು ಬರೆದಿದ್ದಾರೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 24 ಗಂಟೆಗಳಲ್ಲಿ 3,33,533 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ.
ಅದೇ 24 ಗಂಟೆಗಳಲ್ಲಿ ದೇಶದಲ್ಲಿ ಕನಿಷ್ಠ 525 ಕೋವಿಡ್ ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,89,409 ಕ್ಕೆ ಹೆಚ್ಚಿಸಿದೆ.
ಭಾರತದ ಚೇತರಿಕೆಯ ಪ್ರಮಾಣವು ಈಗ 93.18 ಪ್ರತಿಶತದಷ್ಟಿದೆ.