ವಿಕ್ಕಿ – ಕ್ಯಾಟ್ ಮದುವೆಯಷ್ಟೇ ನಿಮ್ಮ ಪಾಸ್ ವರ್ಡ್ ಗಳನ್ನ ಭದ್ರಪಡಿಸಿಕೊಳ್ಳಿ : ದೆಹಲಿ ಪೊಲೀಸ್
ರಾಜಸ್ಥಾನದ ಐಶಾರಾಮಿ ಹೋಟೆಲ್ ಸಿಕ್ಸ್ ಸೆನ್ಸಸ್ ನಲ್ಲಿ ಬಾಲಿವುಡ್ ನ ಸ್ಟಾರ್ ಕಪಲ್ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.. ಆದ್ರೆ ಇವರ ಮದುವೆಯ ವಿಚಾರವನ್ನ ಬಹಳ ಗೌಪ್ಯವಾಗಿಡಲಾಗಿತ್ತು.. ಮದುವೆಯ ನಂತರ ಈ ಜೋಡಿ ಅಧಿಕೃತವಾಗಿ ಮದುವೆ ವಿಚಾರವನ್ನ ಘೋಷಣೆ ಮಾಡುವ ವರೆಗೂ ಈ ಬಗ್ಗೆ ಇಬ್ಬರೂ ಕೂಡ ಎಲ್ಲೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ.. ಅಲ್ಲದೇ ಇವರ ಮದುವೆಗೆ ಬಂದಿದ್ದ ಅತಿಥಿಗಳೂ ಕೂಡ ಸಾಕಷ್ಟು ಗೌಪತ್ಯೆ ಕಾಪಾಡಿದ್ದರು.. ಇದು ಸಾಲದಕ್ಕೆ ಇವರ ಮದುವೆಗೆ ಆಗಮಿಸುವ ಅತಿಥಿಗಳು ಮೊಬೈಲ್ ಬಳಸದಂತೆ ನಿಯಮವನ್ನೂ ವಿಧಿಸಲಾಗಿತ್ತು.. ಇಷ್ಟ್ ಟೈಟ್ ಸೆಕ್ಯುರಿಟಿ , ಗೌಪ್ಯತೆ ನಡುವೆ ವಿಕ್ಕಿ ಕೌಶಾಲ್ ಕ್ಯಾಟ್ ಮದುವೆಯ ಫೋಟೋಗಳು ವಿಡಿಯೋಗಳು ಎಲ್ಲೂ ವೈರಲ್ ಆಗೋಕೆ ಬಿಟ್ಟಿಲ್ಲ.. ಮದುವೆ ನಂತರ ಕ್ಯಾಟ್ – ವಿಕ್ಕಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದು ಬಿಟ್ರೆ.. ಇದು ಇವರ ಮದುವೆಯ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಲೇ ಹೋಯ್ತು..
ಆದ್ರೆ ದೆಹಲಿ ಪೊಲೀಸರು ಈ ಜೋಡಿಯ ಮದುವೆಯ ಪರಿಯನ್ನ ಸಾಮಾಜಿಕ ಮೆಸೇಜ್ ನೀಡೋಕೆ ಬಳಿಸಿ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.. ವಿಕ್ಕಿ ಕೌಶಲ್-ಕತ್ರೀನಾ ಕೈಫ್ ಅವರ ವಿವಾಹದಿಂದ ಸ್ಫೂರ್ತಿ ಪಡೆದು ಅವರ ಮದುವೆಯಷ್ಟೇ ಗೌಪ್ಯತೆಯೊಂದಿಗೆ ಸಾರ್ವನಿಕರು ತಮ್ಮ ಪಾಸ್ ವರ್ಡ್ ಗಳನ್ನ ಭದ್ರವಾಗಿಟ್ಟುಕೊಳ್ಳಬೇಕೆಂದು ದೆಹಲಿ ಪೊಲೀಸರು ಕರೆ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.. ಹೌದು.. ಕತ್ರೀನಾ–ವಿಕ್ಕಿ ಸಂಬಂಧಿಗಳು ಮತ್ತು ಆಪ್ತರು ಸೇರಿದಂತೆ ಕೇವಲ 120 ಮಂದಿಗೆ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಮಾರಂಭಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು.
ಈ ನಡುವೆ ಕತ್ರೀನಾ–ವಿಕ್ಕಿ ಮದುವೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ದೆಹಲಿ ಪೊಲೀಸ್ ಇಲಾಖೆಯು ತಮಾಷೆಯ ಸಲಹೆಯೊಂದನ್ನು ನೀಡಿದೆ. ‘ಹಲೋ ಸಾರ್ವಜನಿಕರೇ ನಿಮ್ಮ ಪಾಸ್‌ವರ್ಡ್‌ಗಳನ್ನು #VicKat ಮದುವೆಯಂತೆಯೇ ಸುರಕ್ಷಿತವಾಗಿರಿಸಿಕೊಳ್ಳಿ’ ಎಂದು ಟ್ವೀಟ್ ಮಾಡಿದೆ. ಅನೇಕರು ಈ ಟ್ವೀಟ್ ಗೆ ತರಹೇವಾರಿ ಕಮೆಮಟ್ ಗಳನ್ನ ಮಾಡ್ತಾ , ತಮಾಷೆ ಮಾಡ್ತಾ ಇದ್ದಾರೆ.. ಹಲವರು ಮೆಚ್ಚುಗೆ ವ್ಯಕ್ತಪಡಿಸ್ತಾಯಿದ್ದಾರೆ.. ದೆಹಲಿ ಪೊಲೀಸರ ಈ ಟ್ವೀಟ್ ವೈರಲ್ ಆಗ್ತಿದೆ.. ಅಂದ್ಹಾಗೆ ವಿಕ್ಕಿ ಕೌಶಾಲ್ ಮದುವೆಯ ವಿಡಿಯೋ ಕ್ಲಿಪ್ ನ ಖ್ಯಾತ ott ಪ್ಲಾಟ್ ಫಾರ್ಮ್ ಅಮೇಜಾನ್ ಪ್ರೈಮ್ ಬರೋಬ್ಬರಿ 80 ಕೋಟಿ ರೂಪಾಯಿಗೆ ಕೊಂಡುಕೊಂಡಿರೋ ಮಾಹಿತಿ ಲಭ್ಯವಾಗಿದೆ..








