ತಾಯಂದಿರ ದಿನದಂದು ವಿಕ್ಕಿ- ಕತ್ರೀನಾ ಮದುವೆಯ ಮತ್ತಷ್ಟು ಚಿತ್ರಗಳು ಬಿಡುಗಡೆ…
ಜಗತ್ತಿನಾದ್ಯಂದತ ಇಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ, ಇದಕ್ಕೆ ಸಿನಿಮಾ ಸೆಲೆಬ್ರಿಟಿಗಳೂ ಹೊರತಲ್ಲ. ಇಂದು ಬೆಳಗ್ಗಿನಿಂದ, ಸೋಶಿಯಲ್ ಮೀಡಿಯಾ ಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಅವರ ತಾಯಿಯೊಂದಿಗಿನ ಪೋಟೋಗಳನ್ನ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ವಿವಾಹವಾಗಿರುವ ಬಾಲಿವುಡ್ ಸೆಲೆಬ್ರಿಟಿ ಕಪಲ್ ಗಳಾದ ಆದರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸಹ ಅಮ್ಮಂದಿರ ದಿನದ ಪ್ರಯುಕ್ತ ಶುಭಾಷಯಗಳನ್ನ ಕೋರಿದ್ದಾರೆ. ಕತ್ರಿನಾ, ತನ್ನ ಮತ್ತು ವಿಕ್ಕಿ ಕೌಶಾಲ್ ಅವರ ತಾಯಿಯೊಂದಿಗೆ ಪೋಟೊ ಪೋಸ್ಟ್ ಮಾಡಿದ್ದಾರೆ, ವಿಕ್ಕಿ ಸಹ ತನ್ನ ತಾಯಿ ಮತ್ತು ಕತ್ರಿನಾ ಅವರ ತಾಯಿಯೊಂದಿಗೆ ಪೋಟೊ ಫೊಸ್ಟ್ ಮಾಡಿ ಶುಭಕೋರಿದ್ದಾರೆ, ಅವರಿಬ್ಬರ ಮದುವೆಯಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
https://www.instagram.com/p/CdSLS4WMRfu/?utm_source=ig_embed&ig_rid=ab97822c-1211-4941-966d-2a84a4117bc3
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9, 2021 ರಂದು ವಿವಾಹವಾದರು. ತೀರಾ ಕಟ್ಟು ನಿಟ್ಟಾಗಿ ಖಾಸಗಿಯಾಗಿ ವಿವಾಹವಾಗಿದ್ದರಿಂದ ಮದುವೆಯ ಕೆಲವೇ ಪೋಟೋಗಳಷ್ಟೆ ಹೊರಬಂದಿದ್ದವು, ಇದೀಗ ಅವರಿಬ್ಬರ ಫ್ಯಾಮಿಲಿ ಪೋಟೋಗಳನ್ನ ಸಹ ನೋಡುವ ಸರದಿ ನಮ್ಮದಾಗಿದೆ.
ವಿಕ್ಕಿ ಕೌಶಾಲ್ ತನ್ನ ತಾಯಿ ವೀಣಾ ಕೌಶಲ್ ಮತ್ತು ಕತ್ರಿನಾ ಅವರ ತಾಯಿ ಸುಝೇನ್ ಟರ್ಕೋಟ್ ಪೋಟೋ ಗೆ ತಾಯಿಯೆಂದರೆ ತಂಪಾದ ನೆರಳುಗಳು, ಬೇರೆ ರೀತಿಯಲ್ಲಿ ಹೇಳುವುದಾದರೆ, ಅಮ್ಮನ ಆಶ್ರಯದಲ್ಲಿ ನೀವು ಚೆನ್ನಾಗಿರುತ್ತೀರಿ #ಹ್ಯಾಪಿ ಮದರ್ಸ್ ಡೇ ಎಂದು ಕ್ಯಾಪ್ಶನ್ ನೀಡಿದ್ದಾರೆ.
https://www.instagram.com/p/CdSLPY3Ngks/?utm_source=ig_embed&ig_rid=c700f049-fb79-4299-b1ef-7fc0bc76be9c
ಕತ್ರಿನಾ ಕೈಫ್ ಕೂಡ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ, ಆದರೆ ಅವು ಮದುವೆ ಪೋಟೋ ಅಲ್ಲ. ಅವಳ ತಾಯಿ, ಸುಜಾನ್ ಜೊತೆಗಿನ ಚಿತ್ರ, ಮತ್ತೊಂದು ಅವಳ ಅತ್ತೆ ವೀಣಾ ಜೊತೆಗಿನ ಮತ್ತೊಂದು ಮುದ್ದಾದ ಫೋಟೋ.








